7 ನೇ ವಾರ್ಡಿನಲ್ಲಿ ಅಭ್ಯರ್ಥಿ ಉಮಾದೇವಿ ಪರ ಕಾಂಗ್ರೆಸ್ ಮುಖಂಡರ ಪ್ರಚಾರ

ಬಳ್ಳಾರಿ ಏ 24 : ಬಾಪೂಜಿ ನಗರ ಪ್ರದೇಶವನ್ನು ಹೊಂದಿರುವ ನಗರದ 7 ನೇ ವಾರ್ಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಉಪ ಮೇಯರ್ ಉಮದೇವಿ ಶಿವರಾಜ್ ಅವರ ಪರವಾಗಿ ನಿನ್ನೆ ಪರಿಶಿಷ್ಟ ಜಾತಿಯ ಕಾಂಗ್ರೆಸ್ ಮುಖಂಡರುಗಳಾದ ಮುಂಡರಗಿ ನಾಗರಾಜ್, ವೆಂಕಟೇಶ್ ಹೆಗಡೆ, ಪತಿ ಶಿವರಾಜ್ ಮೊದಲಾದ ಮುಖಂಡರು ವಾರ್ಡಿನಲ್ಲಿ ಪಾದಯಾಥ್ರೆ ನಡೆಸಿ ಬಿರುಸಿನ ಪ್ರಚಾರ ನಡೆಸಿದರು.
ಉಮದೇವಿ ಆವರು ಕಳೆದ ಬಾರಿ ಆಯ್ಕೆಯಾಗಿ ವಾರ್ಡಿನಲ್ಲಿ ಕೈಗೊಂಡಿರುವ ಅಭಿವೃದ್ದಿ ಕಾಮಗಾರಿಗಳ ಬಗ್ಗೆ ತಿಳಿಸಿ, ಇನ್ನುಳಿದ ಸಮಸ್ಯೆಗಳ ಪರಿಹಾರ ಮತ್ತು ಅಭಿವೃದ್ದಿಗಾಗಿ ಮತ್ತೆ ಅವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.