7 ದಿನಗಳಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಕೆ

ಕಲಬುರಗಿ,ಜ.4: ಜಿಲ್ಲೆಯ ಚಿಂಚೋಳಿ ಪೆÇಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈಚೆಗೆ ನಡೆದಿದ್ದ ನಾಲ್ಕು ವರ್ಷ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣ ಕುರಿತು ಪೆÇಲೀಸರು ತನಿಖೆ ಪೂರ್ಣಗೊಳಿಸಿ ಕೇವಲ 7 ದಿನಗಳಲ್ಲಿಯೇ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದಾರೆ. ಈ ಮೂಲಕ ಕಲಬುರಗಿ ಜಿಲ್ಲಾ ಪೆÇಲೀಸರು ತಾವೆ ಮಾಡಿದ್ದ ದಾಖಲೆಯನ್ನು ಅವರೇ ಮುರಿದಂತಾಗಿದೆ.
ತನಿಖೆ ಪೂರ್ಣಗೊಳಿಸಿ ವೈದ್ಯಕೀಯ ಪರೀಕೆ ವರದಿ ಸೇರಿದಂತೆ ಎಲ್ಲ ದಾಖಲೆಗಳನ್ನು ತನಿಖಾಧಿಕಾರಿಗಳು ಹಾಗೂ ಚಿಂಚೋಳಿ ಠಾಣೆಯ ಸಿಬ್ಬಂದಿ ಸೇರಿಕೊಂಡು ಸಲ್ಲಿಸಿದ್ದನ್ನು ಎಸ್ಪಿ ಇಶಾ ಪಂತ್ ಶ್ಲಾಘಿಸಿದ್ದಾರೆ.
ಈ ಹಿಂದೆ ಆಳಂದ ತಾಲೂಕಿನ ಹಳ್ಳಿಯೊಂದರಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ ಘಟನೆ ಕುರಿತು 12 ದಿನಗಳಲ್ಲಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದಕ್ಕೂ ಮೊದಲು ಮಂಡ್ಯ ಜಿಲ್ಲೆಯ ಮಳವಳ್ಳಿಯ ಪೆÇಲೀಸರು ಅಪ್ರಾಪ್ತಳ ಹತ್ಯಾಚಾರ ಕುರಿತು 23 ದಿನಗಳಲ್ಲಿ ಜಾರ್ಜ್‍ಶಿಟ್ ಸಲ್ಲಿಸಿದ್ದರು.