7 ಗ್ರಾ ಪಂ. ಗಳಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ


(ಸಂಜೆವಾಣಿ ವಾರ್ತೆ)
ಶಿರಹಟ್ಟಿ,ಜು.26: ತಾಲ್ಲೂಕಿನ 14 ಗ್ರಾಮ ಪಂಚಾಯ್ತಿಗಳ ಪೈಕಿ 7 ಗ್ರಾಮ ಪಂಚಾಯ್ತಿಗಳಿಗೆ ಸೋಮವಾರ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯು ಶಾಂತಿಯುತವಾಗಿ ಜರುಗಿತು.
ತಾಲೂಕಿನ ಮಾಗಡಿ ಗ್ರಾ.ಪಂ ನೂತನ ಅಧ್ಯಕ್ಷರಾಗಿ ಮೈಲಾರಪ್ಪ ಹಾದಿಮನಿ, ಉಪಾಧ್ಯಕ್ಷ ಲಲಿತಾ ವಿ. ಪಾಟೀಲ ಅವಿರೋಧವಾಗಿ ಆಯ್ಕೆಯಾಗಿದ್ದರು. ಹೆಬ್ಬಾಳ ಗ್ರಾ.ಪಂ ಅಧ್ಯಕ್ಷರಾಗಿ ಫಕೀರಪ್ಪ ನರಸಮ್ಮನವರ್, ಉಪಾಧ್ಯಕ್ಷ ವೀರಣ್ಣ ಮೆಣಸಿನಕಾಯಿ ಆಯ್ಕೆಯಾಗಿದ್ದಾರೆ. ಛಬ್ಬಿ ಗ್ರಾಪಂ ಅಧ್ಯಕ್ಷರಾಗಿ ಸುವರ್ಣ ದೇವಪ್ಪ ಆರಿ, ಉಪಾಧ್ಯಕ್ಷರಾಗಿ ಕೇಶವ್ ಅಂಗಡಿ, ಬೆಳ್ಳಟ್ಟಿ ಗ್ರಾಪಂ ನೂತನ ಅಧ್ಯಕ್ಷರಾಗಿ ರಮೇಶ ಕೊಂಚಪ್ಪ ನಿರ್ವಾಣಶೆಟ್ಟರ, ಉಪಾಧ್ಯಕ್ಷರಾಗಿ ಗಂಗವ್ವ ತಳವಾರ, ಮಜ್ಜೂರು ಗ್ರಾಪಂನ ಅಧ್ಯಕ್ಷರಾಗಿ ಘನಿಸಾಬ್ ಬರದೂರು, ಉಪಾಧ್ಯಕ್ಷರಾಗಿ ರೇಣುಕಾ ಲಮಾಣಿ, ಮಾಚೇನಹಳ್ಳಿ ಗ್ರಾಪಂನ ಅಧ್ಯಕ್ಷರಾಗಿ ಶರೀಫ್ ಸಾಬ್ ನದಾಫ್, ಉಪಾಧ್ಯಕ್ಷರಾಗಿ ರೇಣವ್ವ ಬಂಡಿವಡ್ಡರ, ಕೊಗನೂರು ಗ್ರಾಪಂನ ಅಧ್ಯಕ್ಷರಾಗಿ ತಿರಕವ್ವ ಹರಿಜನ, ಉಪಾಧ್ಯಕ್ಷರಾಗಿ ಕಸ್ತೂರೆವ್ವ ತಳ್ಳಳ್ಳಿ ಆಯ್ಕೆಯಾಗಿದ್ದಾರೆ.