7 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ

ಬೀದರ:ಮಾ.16:ರಸ್ತೆ ಮತ್ತು ಸೇತುವೆಗಳ ನಿರ್ಮಾಣ ಗ್ರಾಮೀಣ ಭಾಗದ ಜೀವನಾಡಿನಾಡಿಯಾಗಿದ್ದು, ಸಂಚಾರಕ್ಕೆ ರಸ್ತೆಗಳ ಅಭಿವೃದ್ದಿ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಕೆಲಸ ಮಾಡಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.

ಬೀದರ್ ದಕ್ಷಿಣ ಕ್ಷೇತ್ರದ ಸಿಂಧೋಲ ಗ್ರಾಮದಲ್ಲಿನ ರಸ್ತೆಯ ಹಲವು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ? 7 ಕೋಟಿ ವೆಚ್ಚದ ಸೇತುವೆ ಕಾಮಗಾರಿ ಹಾಗೂ ಸಿಂಧೋಲ ಗ್ರಾಮದ ರೈತರ ಜಮೀನಿಗೆ ತೆರಳುವ ಬ್ಯಾರೇಜ್ ಕಳೆದಂಡೆಯಲ್ಲಿ 87 ಲಕ್ಷರೂ. ವೆಚ್ಚದ ಶೀಡಿ ನಿರ್ಮಾಣ ಕಾಮಗಾರಿಗೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಸೇತುವೆ ನಿರ್ಮಾಣ ಕಾಮಗಾರಿ ಈ ಭಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು ಬ್ರಿಡ್ಜ್ ವ್ಯವಸ್ಥೆ ಉತ್ತಮವಾಗಿಲ್ಲ ಕಾರಣ ಅನೇಕ ಜನರು ಶಾಲಾ ಕಾಲೇಜಿನ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿತ್ತು ಹಾಗಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸುಮಾರು ? 7 ಕೋಟಿ ವೆಚ್ಚದಲ್ಲಿ ಈ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. 40ಕ್ಕೂ ಹೆಚ್ಚು ಹಳ್ಳಿಯ ಗ್ರಾಮಸ್ಥರಿಗೆ ಅನುಕೂಲವಾಗುತ್ತದೆ ಹಾಗೂ ಈ ಗ್ರಾಮದ ರೈತರು ಮಳೆಗಾಲದಲ್ಲಿ ಜಮೀನಿಗೆ ತೆರಳಲು ಸಂಕಷ್ಟ ಅನುಭವಿಸುವಂತಾಗಿತ್ತು ಹೀಗಾಗಿ
ಬ್ಯಾರೇಜ್ ಕಳೆದಂಡೆಯಲ್ಲಿ 87 ಲಕ್ಷರೂ. ವೆಚ್ಚದ ಶೀಡಿ ನಿರ್ಮಾಣ ಕಾಮಗಾರಿಗೆ ಸಹ ಚಾಲನೆ ನೀಡಿದ್ದೇನೆ.
ಚುನಾವಣೆ ಸಂದಭದಲ್ಲಿ ಮಾತು ನೀಡಿದಂತೆ ಒಂದೊಂದಾಗಿ ಕಾಮಗಾರಿ ಪ್ರಾರಂಭಿಸುತ್ತಿದ್ದೇನೆ. ಗ್ರಾಮೀಣ ಭಾಗದ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚು ಶ್ರಮಿಸುತ್ತಿದ್ದೇನೆ. ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲೆಂದು ಗುಣಮಟ್ಟದ ಸೇತುವೆ ನಿರ್ಮಾಣವನ್ನು ನಿಗದಿತ ಕಾಲಮಿತಿಯಲ್ಲಿ ಪೂರ್ಣಗೊಳಿಸುವಂತೆ ಸ್ಥಳದಲ್ಲಿದ್ದ ಇಂಜಿನಿಯರ್ ಗಳಿಗೆ ಗುತ್ತಿಗೆದಾರರಿಗೆ ಸೂಚಿಸಿದರು. ಇದಕ್ಕೆ ನಾಗರೀಕರ ಸಹಕಾರ ಅಗತ್ಯವಾಗಿದ್ದು, ಗ್ರಾಮಗಳ ಉತ್ತಮ ಸೇತುವೆ ನಿರ್ಮಾಣಕ್ಕೆ ಸಹಕರಿಸಬೇಕು ಎಂದು ತಿಳಿಸಿದರು.

ಗ್ರಾಮಸ್ಥರು ಮಾತನಾಡಿ, ಈ ಭಾಗದ ಜನರಿಗೆ ಬ್ರಿಡ್ಜ್ ಕಾಮಗಾರಿ ಅತ್ಯಂತ ಮುಖ್ಯವಾಗಿತ್ತು ಚುನಾವಣೆ ಸಂದರ್ಭದಲ್ಲಿ ಈ ಬ್ರಿಡ್ಜ್ ಹೊಸದಾಗಿ ನಿರ್ಮಾಣ ಮಾಡಲು ಮತ್ತು ಸಿಂಧೋಲ ಗ್ರಾಮದ ಜಮೀನಿಗೆ ತೆರಳುವ ನಿಮಿತ್ತ ಬ್ಯಾರೇಜ್ ಕಳೆದಂಡೆ ಶೀಡಿ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದರು ಅಂತೆಯೇ ಶಾಸಕರಾದ ಡಾ.ಶೈಲೇಂದ್ರ ಬೆಲ್ದಾಳೆ ಅವರು ಕಾಮಗಾರಿಗೆ
ಚಾಲನೆ ನೀಡಿದ್ದು ಎಲ್ಲರಿಗೂ ಸಂತಸ ತಂದಿದೆ ಶಾಸಕರು ಕ್ಷೇತ್ರದಲ್ಲಿ ಉತ್ತಮ ಕೆಲಸಗಳು ಮಾಡುವ ಮೂಲಕ ಜನರ ವಿಶ್ವಾಸ ಹೆಚ್ಚಿಸಿಕೊಳ್ಳುತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷೆ ಸುಭದ್ರಾ ಬಾಯಿ, ಉಪಾಧ್ಯಕ್ಷ ಸುಧಾಕರ ರಾಜಗೀರಾ, ಮುಖಂಡರಾದ ಸುರೇಶ ಮಾಶೆಟ್ಟಿ, ಮಾಣಿಕಪ್ಪ ಖಾಶೆಂಪುರ, ಚಂದ್ರಯ್ಯ ಸ್ವಾಮಿ, ಓಂಕಾರ ಮಜಗೆ, ಶಂಕರಪ್ಪ ಬಾಪುರ, ಸಂಗಯ್ಯಾ ಸ್ವಾಮಿ, ಭಗವಂತಪ್ಪ, ಮಸ್ತಾನÀ, ಶಿವಕುಮಾರ ಪಾಟೀಲ, ಧುಳಪ್ಪ ಮಾಳಗಿ ಅಧಿಕಾರಿಗಳು ಗುತ್ತಿಗೆದಾರರು ಮತ್ತಿತರರು ಉಪಸ್ಥಿತರಿದ್ದರು.