7ನೇ ವೇತನ ಆಯೋಗ ಜಾರಿ ಹಕ್ಕೊತ್ತಾಯಕ್ಕೆ ಸಿದ್ಧರಾಗಿ ; ಬಿ.ಪಾಲಾಕ್ಷಿ

ಜಗಳೂರು.ಜ.೧೪: ಯಾವುದೇ ಸಂಘ ಜೀವಂತಿಕೆಯಾಗಿರಬೇಕಾದರೆ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಪ್ರತಿಯೊಬ್ಬ ಸದಸ್ಯರೂ ಕ್ರಿಯಾಶೀಲವಾಗಿ ಕಾರ್ಯನಿವಹಿಸಿದರೆ ಮಾತ್ರ ಸಾಧ್ಯ ಎಂದು ಸರಕಾರಿ ನೌಕರರ ಜಿಲ್ಲಾಧ್ಯಕ್ಷ ಬಿ.ಪಾಲಾಕ್ಷಿ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ  2023ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ನೌಕರರ ಹಿತ ಕಾಯಲು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರು ಅತ್ಯಂತ ಪಾರದರ್ಶಕವಾಗಿ ಮತ್ತುಪಾದರಸದಂತೆ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತವೂ ಸಹ ಕ್ರಿಯಾಶೀಲವಾಗಿ ದುಡಿಯುತ್ತಿದೆ. ನಮ್ಮ ಗುರಿ ಎನ್‍ಪಿಎಸ್ ರದ್ಧತಿ ಜೊತೆಗೆ 7ನೇ ವೇತನ ಆಯೋಗ ಜಾರಿ ಹಕ್ಕೊತ್ತಾಯಕ್ಕೆ ಸಿದ್ಧರಾಗಿ ಎಂದರು.ಶೀಘ್ರವೇ ಜಗಳೂರು ಪಟ್ಟಣದಲ್ಲಿ ಜಿಲ್ಲಾ ನೌಕರರ ಸಂಘದ ಸಮ್ಮೇಳ ಮಾಡಲು ಸಿದ್ದತೆಗಳು ನಡೆಯುತ್ತಿದೆ. ಶಾಸಕ ಎಸ್.ವಿ.ರಾಮಚಂದ್ರ ತನು,ಮನ, ಧನ ನೀಡಲು ಒಪ್ಪಿಕೊಂಡಿದ್ದಾರೆ ಎಂದರು.ರಾಜ್ಯದಲ್ಲಿ ಒಟ್ಟು 6 ಲಕ್ಷ ಸರಕಾರಿ ನೌಕರರಿದ್ದು ಅದರಲ್ಲಿ 2.5 ಲಕ್ಷ ಉದ್ಯೋಗಗಳು ಖಾಲಿ ಇವೆ. ಖಾಲಿ ಇರುವ ಉದ್ಯೋಗವವನ್ನು ಉಳಿದ ಸರಕಾರಿ ನೌಕರರು ತಮ್ಮ ಮೈ ಮೇಲೆ ಎಳೆದುಕೊಂಡು ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.ಹೀಗಾಗಿ ಅವರಿಗೆ ರಿಲ್ಯಾಕ್ಸ್ ಆಗಲು ತುಮಕೂರಿನಲ್ಲಿ ರಾಜ್ಯ ಸ.ನೌ.ಸಂಘದಿಂದ ಸಾಂಸ್ಕøತೀಕ ಕ್ರೀಡಾ ಕೂಟ ನಡೆಯಲಿದೆ. ಎಲ್ಲರೂ ಆನ್ಲೈನ್‍ನಲ್ಲಿ ನೋಂದಾಣಿ ಮಾಡಿಕೊಂಡು ಭಾಗವಹಿಸಿ ಎಂದರು.ತಹಶೀಲ್ದಾರ್ ಜಿ.ಸಂತೋಷ್‍ಕುಮಾರ್ ಮಾತನಾಡಿ, ತಾಲೂಕು ನೌಕರರ ಸಂಘದ ಅಧ್ಯಕ್ಷ ಬಿ.ಆರ್.ಚಂದ್ರಪ್ಪ ನೇತೃತ್ವದಲ್ಲಿ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿವೆ. ನೌಕರರರು ಜನ ಸ್ನೇಹಿಯಾಗಿ ಕೆಲಸ ಮಾಡಬೇಕು. ರಾಜ್ಯಾಧ್ಯಕ್ಷ ಷಡಾಕ್ಷರಿ ಮತ್ತು ಜಿಲ್ಲಾಧ್ಯಕ್ಷ ಪಾಲಾಕ್ಷಿ ಅವರು ನೌಕರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ನೌಕರರ ಸಂಘದ ಗೌರವಾಧ್ಯಕ್ಷ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ.ಮಹೇಶ್ವರಪ್ಪ ಮಾತನಾಡಿ, ಸ.ನೌಕರರ ಜಿಲ್ಲಾ ಸಮ್ಮೇಳನವನ್ನು ಜಗಳೂರಿನಲ್ಲಿ ಅದ್ಧೂರಿಯಾಗಿ ಮಾಡೋಣ. ಅದಕ್ಕೆ ನನ್ನ ಸಂಪೂರ್ಣ ನೆರವು ನೀಡುತ್ತೇನೆ. ನೌಕರರಿಗೆ ಮಾರಕವಾಗಿರುವ ಎನ್‍ಪಿಎಸ್ ರದ್ಧತಿಗೆ ಒಗ್ಗಟ್ಟಿನಿಂದ ಹೋರಾಟ ಮಾಡಿದರಷ್ಟೇ ಸಾಧ್ಯ ಎಂದರು.ತಾ.ಸ.ನೌ.ಸ.ಅಧ್ಯಕ್ಷ ಬಿ.ಆರ್.ಚಂದ್ರಪ್ಪ ಪ್ರಾಸ್ತಾವಿಕ ಮಾತನಾಡಿ, ಕ್ರೀಡೆ, ಸಾಂಸ್ಕøತಿ ಕಾರ್ಯಕ್ರಮ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ನೌಕರರನ್ನು ಕ್ರಿಯಾಶೀಲರನ್ನಾಗಿಸಲು ಸಂಘದ ಪ್ರತಿಯೊಬ್ಬರೂ ಬದ್ಧವಾಗಿದ್ದೇವೆ. ನೌಕರರಿಗೆ ಜ್ಯೋತಿ ಸಂಜೀವಿ ವರದಾನವಾಗಲಿದೆ ಎಂದರು.