7ನೇ ವಾರ್ಡಿನಲ್ಲಿ ಮತ್ತೊಮ್ಮೆ ನಮ್ಮ ಗೆಲುವು ಖಚಿತ:ಶಿವರಾಜ್

ಬಳ್ಳಾರಿ, ಏ.26: ಕಾಂಗ್ರೆಸ್ ಪಕ್ಷದ ಸುಭದ್ರ ಕೋಟೆ ಎಂದೇ ಖ್ಯಾತಿ ಪಡೆದಿರುವ ಬಾಪೂಜಿ ನಗರ ಪ್ರದೇಶ ಹೊಂದಿರುವ 7ನೇ ವಾರ್ಡಿನಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಗೆಲುವು ಖಚಿತ ಇದಕ್ಕೆ ಮತದಾರರ ಸಂಪೂರ್ಣ ಬೆಂಬಲ ಇದೆ ಎಂದು ಕಾಂಗ್ರೆಸ್ ಮುಖಂಡ ಶಿವರಾಜ್ ಹೆಗಡೆ ಹೇಳಿದ್ದಾರೆ.
ವಾರ್ಡಿನಲ್ಲಿ ತಮ್ಮ ಪತ್ನಿ, ಮಾಜಿ ಉಪಮೇಯರ್ ಉಮಾದೇವಿ ಅವರನ್ನು ಮತ್ತೊಮ್ಮೆ ಆಯ್ಕೆ ಮಾಡಲು ಕಣಕ್ಕಿಳಿಸಿದೆ. ಬಿಜೆಪಿಯವರು ಹಣಬಲದ ಪ್ರದರ್ಶನ ನಡೆಸಿದ್ದಾರೆ. ಆದರೆ ಕಳೆದ ಬಾರಿ ಆಯ್ಕೆಯಾಗಿ ವಾರ್ಡಿನಲ್ಲಿ ರಸ್ತೆ, ಬೀದಿ ದೀಪ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದೆ. ಯಾವ ಫಲಾಪೇಕ್ಷವಿಲ್ಲದೆ ವಾರ್ಡಿನ ಅಭಿವೃದ್ಧಿಗೆ ಶ್ರಮಿಸುತ್ತಿರುವ ನಮ್ಮನ್ನು ಮತದಾರರು ಬೆಂಬಲಿಸುತ್ತಿದ್ದಾರೆ. ಎದುರಾಳಿಗಳು ಏನೇ ಮಾಡಲಿ ನಮ್ಮ ಗೆಲುವು ನಿಶ್ಚಿತ ಎಂದು ಅವರು ಹಲವಾರು ಮುಖಂಡರ ಜೊತೆ ಮನೆ ಮನೆಗೆ ತೆರಳಿ ಅಂತಿಮ ಸುತ್ತಿನ ಮತಯಾಚನೆಗೆ ತೆರಳಿಸಿದರು.