ಭಾರತದಲ್ಲಿನ ರಿಪಬ್ಲಿಕ್ ಆಫ್ ಕೊರಿಯಾದ ರಾಯಭಾರಿ ಚಾಂಗ್ ಜೇಬಾಕ್ ಅವರ ನೇತೃತ್ವದ ನಿಯೋಗವು ಇಂದು ಬೆಳಿಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿತು. ಸಭೆಯಲ್ಲಿ ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಯೋಜನಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ. ಎಸ್. ಸೆಲ್ವಕುಮಾರ್, ಸಿಎಂ ಕಾರ್ಯದರ್ಶಿ ಎನ್. ಜಯರಾಂ, ಆಯುಕ್ತ ಗುಂಜನ್ ಕೃಷ್ಣರವರು ಉಪಸ್ಥಿತರಿದ್ದರು.