ಸಚಿವರಾದ ಬಳಿಕ ಇಂದು ಬೆಳಿಗ್ಗೆ ನಗರದ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿದ್ದ ಕಾರ್ಯಾಧ್ಯಕ್ಷ ಹಾಗೂ ಸಚಿವ ಈಶ್ವರಖಂಡ್ರೆ ಅವರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ವಕ್ತಾರ ವಿ. ಶಂಕರ್‌ರವರು ಖಂಡ್ರೆ ಭಾವಚಿತ್ರವಿರುವ ಫೋಟೋ ನೀಡಿ ಗೌರವಿಸಿದರು. ಕಾಂಗ್ರೆಸ್ ಮುಖಂಡರುಗಳಾದ ಜಿ. ಜನಾರ್ಧನ್, ಎ. ಆನಂದ್, ಸುಧಾಕರ್, ಚಂದ್ರು, ಮುರಳಿ, ಈ ಶೇಖರ್, ಅನಿಲ್, ರಾಮಕೃಷ್ಣ, ಮತ್ತಿತರರು ಇದ್ದಾರೆ. ಇದೇ ಸಂದರ್ಭದಲ್ಲಿ ಸಚಿವರು ಕಾರ್ಯಕರ್ತರ ಅಹವಾಲುಗಳನ್ನು ಸ್ವೀಕರಿಸಿದರು.