ರಾಷ್ಟ್ರೀಯ ಸದ್ಭಾವನ ಪ್ರಶಸ್ತಿ ಪುರಸ್ಕೃತರು ಸರ್ವಧರ್ಮ ಸಮಾಜ ಸೇವಕರಾದ ರಮೇಶ ಮಹದೇವಪ್ಪನವರ ಜನ್ಮದಿನದ ಅಂಗವಾಗಿ ಬೆಂಗೇರಿ ಖಾದಿಗ್ರಾಮದ್ಯೋಗದಲ್ಲಿ 10 ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಹಾಗೂ ಹೊಲಿಗೆ ತರಬೇತಿ ಸಂಪೂರ್ಣಗೊಳಿಸಿದ ಮಹಿಳೆಯರಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಮತ್ತು ರಕ್ತದಾನ ಶಿಬಿರ ನಡೆಯಿತು. ಸಾನಿಧ್ಯವನ್ನು ಶ್ರೀ ಬಸವಲಿಂಗ ಮಹಾಸ್ವಾಮಿಗಳು ರುದ್ರಾಕ್ಷಿ ಮಠ ಹುಬ್ಬಳ್ಳಿ, ಹಾಗೂ ಹಾಜಿ ಅಬ್ದುಲ್ ಖಾದರ್ ಸಾಬ್, ಫಾದರ್ ಅಲ್ವಿನ್ ಸುಧೀರ್ ವಹಿಸಿದ್ದರು. ಪಾಲಿಕೆ ಸದಸ್ಯರಾದ ಎಂ. ವೈ. ನರಗುಂದ, ಬೀರಪ್ಪ ಕಂಡೇಕಾರ, ಪ್ರಕಾಶ ಕುರಹಟ್ಟಿ, ಮಾಜಿ ಸದಸ್ಯರಾದ ಪಿ. ಕೆ. ರಾಯನಗೌಡ್ರು, ಹೂವಪ್ಪ ದಾಯಗೋಡಿ, ಗುರುಸಿದ್ದಪ್ಪ ಕುಂದಗೋಳ, ರಜಾಕ್ ನದಾಫ್, ಹಟೇಲಸಾಬ್ ಮುಲ್ಲಾ, ಹನುಮಂತಪ್ಪ ಮಳಗಿ, ದಶರಥ ಕಾಳೆ, ಅಮೀರಖಾನ್ ಚಂದನಮಟ್ಟಿ, ಪ್ರವೀಣ ಹುರಳಿ, ಎಲ್ಲಪ್ಪ ಕಾಳೆ, ರಾಜಪ್ಪ ಕಾಳಿ, ನಜೀರಅಹಮದ್ ಮುಲ್ಲಾ, ಫಕೀರಪ್ಪ ಗುಲಗಂಜಿ, ಶಿವಾನಂದ ಮಠಪತಿ, ರಾಜು ಕಾಳೆ ಅಶೋಕ ವಾಲ್ಮೀಕಿ, ಬಶಿರ ಮುಸಾಫಿರ್, ಗಣೇಶ್ ಶೆಟ್ಟಿ, ಸಾಗರ ಭಟ್ನಾಳ್, ಕಾಶಿಮ್ ಕೂಡಲಗಿ, ಶಕೀಲ್ ವಲಿಅಹ್ಮದ್, ಗುರುರಾಜ್ ಹೊರಟ್ಟಿ, ಉಮೇಶ ಸೂರ್ಯವಂಶಿ, ಕಲಂದರ ಮುಲ್ಲಾ ಉಪಸ್ಥಿತರಿದ್ದರು.