ರಂಗೋತ್ರಿ ಮಕ್ಕಳ ರಂಗ ಶಾಲೆ ನಾಡಿನ ಹೆಸರಂತ ಜಾನಪದ ಕಲಾವಿದ ಜನಘಟ್ಟ ಕೃಷ್ಣಮೂರ್ತಿ ಅವರ ನಿಧನಕ್ಕೆ ನುಡಿ ನಮನ ಗೀತಾ ಗಾಯನ ಆಯೋಜಿಸಲಾಯಿತು. ಸಮಾರಂಭದಲ್ಲಿ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು, ಸಾಹಿತಿ ಬೈರಮಂಗಲ ರಾಮೇಗೌಡ, ರಂಗ ತಜ್ಞರಾದ ಡಾ ಎ.ಅರ್ ಗೋವಿಂದಸ್ವಾಮಿ, ರಂಗೋತ್ರಿ ಕುಮಾರ್, ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದರಾಮ ಶಿಂಧೆ, ಕೃಷ್ಣಯ್ಯ, ನರೇಂದ್ರ ಬಾಬು, ತಬಲನಾಗರಾಜ್, ರೇಣುಕಯ್ಯ ,ಕುವೆಂಪು ಪ್ರಕಾಶ್ ಮುಂತಾದ ಕಲಾವಿದರು ನುಡಿನಮನ ಸಲ್ಲಿಸಿದರು. ಗಣೇಶ್ ಪ್ರಸಾದ್ ತಂಡದ ಗಾಯನ ಇತ್ತು.