ದಿನೇಶ್ ಗುಂಡೂರಾವ್‌ರವರು ಗಾಂಧಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಜಯಭೇರಿ ಬಾರಿಸಬೇಕು. ಹಾಗೆಯೇ ರಾಜ್ಯ ಸರ್ಕಾರದಲ್ಲಿ ಮಂತ್ರಿಯಾದರೆ ಕೇದರನಾಥದಲ್ಲಿರುವ ಶಿವ ದೇವಾಲಯಕ್ಕೆ ಬಂದು ದರ್ಶನ ಮಾಡುತ್ತೇನೆ ಎಂದು ಚಿಕ್ಕಪೇಟೆ ವಾರ್ಡ್ ಕಾಂಗ್ರೆಸ್ ಪಕ್ಷದ ಮುಖಂಡರಾದ ರಾಘವ್ ಸುಲ್ ಗಾಯ್ ಹರಕೆ ಹೊತ್ತಿದ್ದರು. ದಿನೇಶ್ ಗುಂಡೂರಾವ್‌ರವರು ಶಾಸಕರಾಗಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾಗಿ ಪದಗ್ರಹಣ ಮಾಡಿದ ನಂತರ ರಾಘವ್ ಸುಲ್‌ಗಾಯ್‌ರವರು ಕೇದರನಾಥಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.