ಹು-ಧಾ. ಮಹಾನಗರ ಪಾಲಿಕೆ ಮಾಜಿ ಹಿರಿಯ ಸದಸ್ಯ ಅಲ್ತಾಫ ನವಾಜ ಎಂ. ಕಿತ್ತೂರ ಅವರ 60ನೇ ಜನ್ಮದಿನಾಚರಣೆ ಸಂದರ್ಭದಲ್ಲಿ ಅಲ್ತಾಫ ನಗರದ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ, ಪಠ್ಯಪುಸ್ತಕ, ಜೊತೆಗೆ ಸಿಹಿ ವಿತರಿಸಲಾಯಿತು. ಮೈನು ಮುಲ್ಲಾ, ಅಬ್ದುಲ್ ರಬ್ಬಾನಿ ರಾಯಚೂರ, ಮುಖ್ಯಾಧ್ಯಾಪಕರಾದ ರಹಿನಾ ಸರಗಿರೋ, ಮುಮ್ತಾಜ ಖತೀಬ, ಮೀರಾ ಕುಲಕರ್ಣಿ, ಫರಿದಾ ಸರಗಿರೊ ಮತ್ತಿತರರು ಉಪಸ್ಥಿತರಿದ್ದರು.