69ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ನ14:  69 ನೇ ಅಖಲ ಭಾರತ ಸಹಕಾರ ಸಪ್ತಾಹ ಜಿಲ್ಲೆಯಾದ್ಯಂತ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
ಹೊಸಪೇಟೆಯ ವಿಕಾಸ ಬ್ಯಾಂಕ್, ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್, ಸಹಕಾರಿಗಳ ಮಾತೃ ಸಂಸ್ಥೆಯಂದೆ ಕರೆಯಲ್ಪಡುವ ಬಳ್ಳಾರಿ ಜಿಲ್ಲಾ ಸಹಕಾರಿ ಯೂನಿಯನ್‍ನಲ್ಲಿ ಸಪ್ತಾಹದ ಸಪ್ತವರ್ಣದ ಧ್ವಜಾರೋಹಣದೊಂದಿಗೆ ಚಾಲನೆ ನೀಡಲಾಯಿತು.
ವಿಕಾಸ ಬ್ಯಾಂಕ್‍ನಲ್ಲಿ ನಿರ್ದೇಶಕ ರಮೇಶ ಪುರೋಹಿತ್ ಧ್ವಜಾರೋಹಣ ನೆರವೇರಿಸಿದರು, ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್‍ನಲ್ಲಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಹರೀಶ್ ಮತ್ತು ಜಿಲ್ಲಾ ಸಹಕಾರಿ ಯೂನಿಯನ್‍ನಲ್ಲಿ ನಿರ್ದೇಶಕ ಅಯ್ಯಾಳಿ ಶಂಕ್ರಪ್ಪ ಧ್ವಜಾರೋಹಣ ನೆರೆವೇರಿಸಿದರು.
ಈ ವರ್ಷ “ಭಾರತ @ 75 -ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ” ಧ್ಯೇಯದೊಂದಿಗೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಕಾರ್ಯಕ್ರಮಗಳು ನಡೆಯಲಿವೆ. ಸಹಕಾರ ಶಿಕ್ಷಣ, ಮಾರ್ಗದರ್ಶನ ಮತ್ತು ಪ್ರಚಾರ ಕಾರ್ಯಕ್ರಮ ಈ ಏಳು ದಿನಗಳ ಕಾಲ ನಡೆಯಲಿದ್ದು ಸಹಕಾರಿ ಆಂದೋಲನವನ್ನು ಹೆಚ್ಚು ಜನಪ್ರೀಯಗೊಳಿಸುವುದು ಸಪ್ತಾಹದ ಉದ್ದೇಶವಾಗಿದೆ ಎಂದು ಜಿಲ್ಲಾ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ನಾಗರಾಜ ತಿಳಿಸಿದರು