ರಸ್ತೆ ಅಪಘಾತದಲ್ಲಿ ಈಚೆಗೆ ಮೃತಪಟ್ಟ ಬಾಗಲಕೋಟ ಕಾಂಗ್ರೆಸ್ ಕಾರ್ಯಕರ್ತ ಆರ್.ಎಚ್. ಮುದಗಲ್ ಅವರ ವಾಜಪೇಯಿ ಕಾಲೋನಿಯ ನಿವಾಸಕ್ಕೆ ಶಾಸಕ ಎಚ್.ವೈ. ಮೇಟಿ ಭೇಟಿ ನೀಡಿ ಸಾಂತ್ವನ ಹೇಳಿದರು. ಅಪಘಾತ ನಡೆಸಿದ ವಾಹನ ಸವಾರ ಪರಾರಿಯಾಗಿದ್ದು, ಕೂಡಲೇ ಪತ್ತೆ ಮಾಡುವಂತೆ ಪೆÇಲೀಸ್ ಅಧಿಕಾರಿಗಳಿಗೆ ಸೂಚಿಸಿದರು. ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ರಜಾಕ ಬೇನೂರ, ಅಮೀನಸಾಬ ರಕ್ಕಸಗಿ ಮುಂತಾದವರು ಇದ್ದರು.