ಕೆಪಿಸಿಸಿ ಒಬಿಸಿ ಘಟಕದ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪನವರು ರಾಜ್ಯದ ನೂತನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡ ಪ್ರಯುಕ್ತ ಅವರ ಅಭಿಮಾನಿ ಬಾದಾಮಿ ತಾಲೂಕಿನ ನರಸಾಪೂರ ಗ್ರಾಮದ ಯುವಮುಖಂಡ, ಕೆಪಿಸಿಸಿ ಒಬಿಸಿ ಘಟಕದ ರಾಜ್ಯ ಉಪಾಧ್ಯಕ್ಷ ಮಂಜುನಾಥ ಗುಬ್ಬಿ ಇವರು ರವಿವಾರ ಶ್ರೀ ಬನಶಂಕರಿ ದೇವಿಗೆ 1001 ಇಡುಗಾಯಿ ಒಡೆದು ಹರಕೆ ತೀರಿಸಿದರು.