ಅಖಿಲ ಭಾರತ ಪಂಚಮಸಾಲಿ ಸಮುದಾಯದ ಯುವ ನಾಯಕ, ಹುನಗುಂದ ಶಾಸಕ ವಿಜಯನಂದಾ ಕಾಶಪ್ಪನವರ್‌ಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಸಮುದಾಯದ ಮುಖಂಡರು ನಗರದ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರ ಪ್ರತಿಮೆ ಮುಂಭಾಗ ಇಂದು ಪ್ರತಿಭಟನೆ ನಡೆಸಿದರು.