ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಉತ್ತಮ ಆಡಳಿತ ನಡೆಸಲು, ಜನತೆಯ ಸೇವೆ ಮಾಡಲು ಶಕ್ತಿ ನೀಡಲಿ ಎಂದು ಪ್ರಾರ್ಥಿಸಿ ಭಗವಾನ್ ಮಾರುತಿ ದೇವಾಲಯದಲ್ಲಿ ಯುವ ಕಾಂಗ್ರೆಸ್ ವತಿಯಿಂದ ವಿಶೇಷ ಪೂಜೆ ನಡೆಸಲಾಯಿತು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಮುಖಂಡರಾದ ಎ. ಆನಂದ್, ಈ. ಶೇಖರ್, ಬಿ. ಮಂಜುನಾಥ್, ಹೇಮರಾಜು, ಉಮೇಶ್, ಅನಿಲ್ ಕುಮಾರ್, ಪ್ರಶಾಂತ್, ಚಿನ್ನಿ, ಪ್ರಕಾಶ್, ಓಬಳೇಶ್, ಗಿರೀಶ್ ಮತ್ತಿತರರು ಇದ್ದಾರೆ.