ನರೇಗಲ್ ಪಟ್ಟಣದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಶ್ರೀ ರೇಣುಕಾದೇವಿ ಯುವಕರ ಸಂಘದ ಸದಸ್ಯರು ರೋಣ ಮತ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಜಿ. ಎಸ್. ಪಾಟೀಲ ಅವರ ಗೆಲುವನ್ನು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಸತೀಶ ಮಾಳವಾಡ, ಸದ್ದಾಂ ನಶೇಖಾನ್, ವಿನಾಯಕ ಕಟ್ಟಿಮನಿ, ಆನಂದ ಹನಮಸಾಗರ, ಬಸವರಾಜ ಬಿಸನಳ್ಳಿ, ಮಲ್ಲೇಶ ಬೆಡಗಲ್, ನಿಂಗನಗೌಡ ಹಿರೇಗೌಡ್ರ, ಅಶೋಕ ತಳವಾರ, ಬಸವರಾಜ ತಳವಾರ, ಶ್ರೀಕಾಂತ್ ಹೊಸಮನಿ, ಕಳಕಪ್ಪ ಜೋಗಿ, ಸುರೇಶ್ ಕೊತಬಾಳ, ಆಕಾಶ ತಳವಾರ, ಪ್ರಶಾಂತ ತಳವಾರ, ವಿಜಯ ಲಕ್ಕನಗೌಡ್ರ, ಪ್ರದೀಪ್ ಲಕ್ಕನಗೌಡ್ರ, ಪ್ರವೀಣ್ ಹೂಗಾರ, ಮಾಶಪ್ಪ ಕೊಂಡಿ, ರಮೇಶ ಕಾಟಿ, ರಾಜೂ ಅದ್ವಾನಿ ಇದ್ದರು.