ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ 5ನೇ ಇಂಡಿಯನ್ ಓಪನ್ ಪ್ಯಾರಾ ಅಥ್ಲೆಟಿಕ್ಸ್ ಇಂಟರ್‍ನ್ಯಾಶನಲ್ ಚಾಂಪಿಯನ್‍ಶಿಪ್ 2023ರಲ್ಲಿ 3ನೇ ರ್ಯಾಂಕ್ (ಕಂಚಿನ) ಪಡೆದ ಹಳೆ ಹುಬ್ಬಳ್ಳಿಯ ಕಲ್ಮೇಶ್ವರನಗರ ನಿವಾಸಿ ನಿಲೋಫರ್ ಶಂಶುದ್ದೀನ್ ಧಾರವಾಡ ಅವರನ್ನು ಅಂಜುಮನ್-ಎ-ಇಸ್ಲಾಂ ಹುಬ್ಬಳ್ಳಿ ಉಪಾಧ್ಯಕ್ಷ ಅಲ್ತಾಫ್ ನವಾಜ್ ಕಿತ್ತೂರ ಸನ್ಮಾನಿಸಿದರು. ಅಬ್ದುಲ್ ರಜಾಕ್ ಸವಣೂರು, ವಸೀಂ ಕಂಚಗಾರ್, ಮೆಹತಾಬ್, ರಿಯಾಜ್ ಮತ್ತಿತರರು ಉಪಸ್ಥಿತರಿದ್ದರು.