
ಕುರಾನ್ ಸಂದೇಶ ಪಾಲನೆಯಿಂದ ಶಾಂತಿ: ಸಿ.ಎ. ಇಸ್ಪಾಕ್ ಪುತ್ತೂರು
ಬೀದರ್:ಮೇ.12: ಕುರಾನ್ ಸಂದೇಶ ಪಾಲನೆಯಿಂದ ಜಗತ್ತಿನಲ್ಲಿ ಶಾಂತಿ ನೆಲೆಗೊಳ್ಳುತ್ತದೆ ಎಂದು ಚಿಂತಕ ಸಿ.ಎ. ಇಸ್ಪಾಕ್ ಪುತ್ತೂರು ಹೇಳಿದರು.
ಇಲ್ಲಿಯ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಆಯೋಜಿಸಿದ್ದ ಈದ್ ಮಿಲನ್ ಸ್ನೇಹಕೂಟದಲ್ಲಿ ಅವರು ಮಾತನಾಡಿದರು.
ನಾಲಿಗೆ ಹರಿಬಿಡದೇ ಹಿಡಿತದಲ್ಲಿ ಇಟ್ಟುಕೊಳ್ಳುವುದು, ಪರ ನಿಂದನೆ ಮಾಡದಿರುವುದು, ಸತ್ಯದ ಪರವಾಗಿ ನಿಲ್ಲುವುದು, ಭಯೋತ್ಪಾದನೆ, ಕೊಲೆ, ಸುಲಿಗೆ ಹಾಗೂ ಹಿಂಸೆಯನ್ನು ಖಂಡಿಸುವುದು ಮಹಮ್ಮದ್ ಪೈಗಂಬರ್ ಅವರ ಸಂದೇಶಗಳಾಗಿವೆ ಎಂದು ತಿಳಿಸಿದರು.
ಕ್ರೈಸ್ತ ಧರ್ಮಗುರು ನೆಲ್ಸನ್ ಸುಮಿತ್ರ, ಭಾಲ್ಕಿ ಹಿರೇಮಠದ ಮಹಾಲಿಂಗ ದೇವರು, ಗುರುದ್ವಾರ ಪ್ರಬಂಧಕ ಕಮಿಟಿಯ ಜ್ಞಾನಿ ದರಬಾರಾಸಿಂಗ್, ಮಹಮ್ಮದ್ ರಫಿಕಸಾಬ್, ಮೌಲ್ವಿ ಮಹಮ್ಮದ್ ಫಹಿಮೊದ್ದಿನ್ ಮಾತನಾಡಿದರು.
ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್, ಮಹಮ್ಮದ್ ಆಸಿಫೆÇದ್ದಿನ್, ಮೌಲಾನಾ ಅಬ್ದುಲ್ ಗನಿ ಖಾನ್, ಸೈಯದ್ ಶಾಹ ಅಸದುಲ್ಲಾ ಹುಸೇನಿ, ಡಾ. ಹುಸ್ಸಾಮುದ್ದಿನ್ ಉಝೈಕ, ರಾಜೇಂದ್ರಕುಮಾರ ಗಂದಗೆ, ಮಹಮ್ಮದ್ ಅಕ್ರಂ ಅಲಿ, ಸುಮಂತ ಕಟ್ಟಿಮನಿ, ಮಹಮ್ಮದ್ ಸೈಫೆÇದ್ದಿನ್, ನಫುರಾಜ ಅಂಜುಮ್, ಸೈಯದ್ ಅಬ್ದುಲ್ ಸತ್ತಾರ್, ನಸೀಮುನ್ನಿಸ್ಸಾ ಇದ್ದರು. ಗುರುನಾಥ ಗಡ್ಡೆ ಸ್ವಾಗತಿಸಿದರು. ಮಹಮ್ಮದ್ ನಿಜಾಮುದ್ದಿನ್ ನಿರೂಪಿಸಿದರು. ಸೈಯದ್ ಅಬ್ದುಲ್ ಸತ್ತಾರ್ ವಂದಿಸಿದರು.
ಜಮಾ ಅತೆ ಇಸ್ಲಾಮಿ ಹಿಂದ್, ಸದ್ಭಾವನಾ ಮಂಚ್ ಹಾಗೂ ರಾಬ್ತಾ ಎ ಮಿಲ್ಲತ್ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.