68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ: ಅಜಯ್ ದೇವಗನ್, ಸೂರ್ಯಗೆ ನಟ, ಅಪರ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನ

ನವದೆಹಲಿ,ಜು.22- 2020ನೇ ಸಾಲಿನ 68 ನೇ ಚಲನ‌ಚಿತ್ರ ರಾಷ್ಟ್ರೀಯ ಪ್ರಶಸ್ತಿಗಳನ್ನು ಕೇಂದ್ರ ಸರ್ಕಾರ ಇಂದು ಪ್ರಕಟಿಸಿದ್ದು ಬಾಲಿವುಡ್ ನ ಅಜಯ್ ದೇವಗನ್ ಮತ್ತು ತಮಿಳು ನಟ ಸೂರ್ಯ ಅವರು ಜಂಟಿಯಾಗಿ ಅತ್ಯುತ್ತಮ‌ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ತಮಿಳಿನ‌ ಸೂರೈ ಪೊಟ್ರು ಚಿತ್ರದ ನಟನೆಗಾಗಿ ಅಪರ್ಣ ಬಾಲ ಮುರುಳಿ ಅವರು ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾರೆ.

ಬಾಲಿವುಡ್ ನಟ ಅಜಯ್ ದೇವಗನ್ ಅವರು ತಾನ್ಜಿ ಅನ್ ಸಂಗ್ ವಾರಿಯರ್ ಮತ್ತು ತಮಿಳು ನಟ ಸೂರ್ಯ ಸೂರೈ ಪೊಟ್ರು ಚಿತ್ರಕ್ಕಾಗಿ ಅತ್ಯುತ್ತಮ‌ ನಟ ಪ್ರಶಸ್ತಿಯನ್ನು ಜಂಟಿಯಾಗಿ ಹಂಚಿಕೊಂಡಿದ್ದಾರೆ.

ಅಜಯ್ ದೇವಗನ್ ಅವರಿಗೆ ಮೂರನೇ ಬಾರಿ ಅತ್ಯುತ್ತಮ‌ ನಟ ರಾಷ್ಟ್ರೀಯ ಪ್ರಶಸ್ತಿ ಪಡೆಯುತ್ತಿದ್ದಾರೆ. ಅವರ ತಾಂಜಿ ಚಿತ್ರ ದೇಶ ವಿದೇಶಗಳಲ್ಲಿ ಕೋಟ್ಯಾಂತರ ಅಭಿಮಾನಿಗಳ ಮನಸೂರೆಗೊಂಡಿತ್ತು.

ದೇಶದ ಜನರಿಗೆ ಕಡಿಮೆ‌ ದರದಲ್ಲಿ ಏರ್ ಡೆಕ್ಕನ್ ವಿಮಾನಯಾನ ಸೇವೆ ಆರಂಭಿಸಿದ ಕ್ಯಾಪ್ಟನ್ ಗೋಪಿನಾಥನ್ ಕಥೆ ಆಧರಿಸಿದ ಸೂರೈ‌ಪೊಟ್ರು ಚಿತ್ರದಲ್ಲಿ ತಮಿಳು‌ನಟ ಸೂರ್ಯ ಅಭಿನಯ ಮನಮೋಹವಾಗಿತ್ತು.ಅಲ್ಲದೆ ಚಿತ್ರಕ್ಕೆ ಪ್ರಶಂಸೆಯ ಸುರಿಮಳೆ ವ್ಯಕ್ತವಾಗಿತ್ತು.

ನಟ ಸೂರ್ಯ ಮತ್ತು ಗುನೀತ್ ಮೋಂಗಾ ಅವರು ಜಂಟಿಯಾಗಿ ಸಿನಿಮಾಕ್ಕೆ ಬಂಡವಾಳ ಹಾಕಿದ್ದರು.ಈ ಚಿತ್ರ ಒಟಿಟಿಯಲ್ಲಿ ತೆರೆಗೆ ಬಂದಿತ್ತು.

ಹೆಚ್ಚು ಸ್ನೇಹಿ ರಾಜ್ಯ:

ಉತ್ತರಾಖಂಡ ಮತ್ತು ಉತ್ತರ ಪ್ರದೇಶವು ಅತ್ಯಂತ ಚಲನಚಿತ್ರ ಸ್ನೇಹಿ ಪ್ರಶಸ್ತಿಯನ್ನು ಪಡೆದುಕೊಂಡಿದೆ.
“ಹೆಚ್ಚು ಚಲನಚಿತ್ರ ಸ್ನೇಹಿ ಪ್ರಶಸ್ತಿಯು ಉತ್ತರಾಖಂಡ ಮತ್ತು ಉತ್ತರ ಪ್ರದೇಶ ರಾಜ್ಯಕ್ಕೆ ಸಂದಿವೆ.ಹೆಚ್ಚು ಚಲನಚಿತ್ರ ಸ್ನೇಹಿ ಚಲನಚಿತ್ರ ರಾಜ್ಯವು ಮಧ್ಯಪ್ರದೇಶಕ್ಕೆ ಸಲ್ಲುತ್ತದೆ” ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ನೀರಜಾ ಶೇಖರ್ ಹೇಳಿದ್ದಾರೆ.

ಈ ಹಿಂದೆಯೂ ಮಧ್ಯಪ್ರದೇಶಕ್ಕೆ ಪ್ರಶಸ್ತಿ ಲಭಿಸಿದೆ.
ನಿರ್ದೇಶಕ-ನಿರ್ಮಾಪಕ ವಿಪುಲ್ ಶಾ ನೇತೃತ್ವದ 10 ಸದಸ್ಯರ ತೀರ್ಪುಗಾರರ ತಂಡ ಬೆಳಗ್ಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಅವರನ್ನು ಭೇಟಿ ಮಾಡಿ 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಕುರಿತು ವರದಿ ಸಲ್ಲಿಸಿತು.

30 ವಿವಿಧ ಭಾಷೆಗಳಿಗೆ ಪ್ರಶಸ್ತಿ

ಈ ವರ್ಷ, 50 ವಿಭಾಗಗಳಲ್ಲಿ 300 ಕ್ಕೂ ಹೆಚ್ಚು ಚಲನಚಿತ್ರಗಳು ಮತ್ತು 150 ಚಲನಚಿತ್ರಗಳು ಬಹುಮಾನಕ್ಕಾಗಿ ಸ್ಪರ್ಧಿಸುತ್ತಿವೆ. ಚಲನಚಿತ್ರಗಳಲ್ಲಿ 30 ವಿವಿಧ ಭಾಷೆಗಳಿವೆ.ಅಧ್ಯಕ್ಷ ಷಾ ಅವರನ್ನು ಹೊರತುಪಡಿಸಿ, ತೀರ್ಪುಗಾರರ ಸದಸ್ಯರು ಛಾಯಾಗ್ರಾಹಕ ಧರಂ ಒಳಗೊಂಡಿದ್ದರು

ಛಾಯಾಗ್ರಾಹಕ ಧರಮ್ ಗುಲಾಟಿ, ರಾಷ್ಟ್ರಪ್ರಶಸ್ತಿ ವಿಜೇತ ಬಂಗಾಳಿ ನಟಿ ಶ್ರೀಲೇಖಾ ಮುಖರ್ಜಿ, ಛಾಯಾಗ್ರಾಹಕ ಜಿಎಸ್ ಭಾಸ್ಕರ್, ಎ ಕಾರ್ತಿಕ್ರಾಜ, ವಿಎನ್ ಆದಿತ್ಯ, ವಿಜಿ ತಂಪಿ, ಸಂಜೀವ್ ರತ್ತನ್, ಎಸ್ ತಂಗದುರೈ ಮತ್ತು ನಿಶಿಗಂಧ ಅಧ್ಯಕ್ಷ ಷಾ ಅವರನ್ನು ಹೊರತುಪಡಿಸಿ ತೀರ್ಪುಗಾರರ ಸದಸ್ಯರಾಗಿದ್ದರು.

ನಿರ್ಮಾಪಕ-ನಿರ್ದೇಶಕ ವಿಪುಲ್ ಷಾ”ಸ್ವೀಕರಿಸಿದ ರೀತಿಯ ಪ್ರತಿಕ್ರಿಯೆಯನ್ನು ನೋಡುವುದು ಸಂತೋಷಕರವಾಗಿದೆ.ಚಲನಚಿತ್ರಗಳನ್ನು ನಿರ್ಮಿಸಲು ಅಥವಾ ನಿರ್ಮಿಸಲು ಇದು ತುಂಬಾ ಕಷ್ಟಕರವಾದ ಕೋವಿಡ್ ಸಂದಿಗ್ದ ಪರಿಸ್ಥಿತಿ ಎದಿರಿಸಿತ್ತು ಎಂದಿದ್ದಾರೆ.

“ಸಾಕ್ಷ್ಯಚಿತ್ರಗಳು ಸೇರಿದಂತೆ ಸುಮಾರು 140 ನಾನ್-ಫೀಚರ್ ಚಲನಚಿತ್ರಗಳನು ವೀಕ್ಣಿಸಿ ಮತ್ತು ವಿಶೇಷವಾಗಿ ಈಶಾನ್ಯದಂತಹ ಪ್ರದೇಶಗಳಿಂದ ಬಂದಿರುವ ವಿಷಯವನ್ನು ನೋಡುವುದು ಅದ್ಭುತವಾಗಿದೆ.”ಪತ್ರಕರ್ತ ಅನಂತ್ ವಿಜಯ್ ಅವರು ಸಿನಿಮಾ ವಿಭಾಗದಲ್ಲಿ ಅತ್ಯುತ್ತಮ ಅಧ್ಯಕ್ಷತೆ ವಹಿಸಿದ್ದರು.

  • ಅತ್ಯುತ್ತಮ‌ ನಟ- ಅಜಯ್ ದೇವಗನ್,( ತಾನ್ಜಿ ಅನ್ ಸಂಗ್ ವಾರಿಯರ್)
    ಸೂರ್ಯ ( ಸೂರೈ ಸಪೊಟ್ರು)
  • ಅತ್ಯುತ್ತಮ ನಟಿ- ಅಪರ್ಣಾ ಬಾಲ‌ಮುರುಳಿ( ಸೂರೈ ಪೊಟ್ರು)
  • ಎರಡನೇ ಅತ್ತುತ್ತಮ‌ ಚಿತ್ರ; ಡೊಳ್ಳು ( ಕನ್ನಡ)
  • ಅತ್ಯುತ್ತಮ ಗೀತ‌ರಚನೆ- ಮನೋಜ್ ಮುತಾಂಶೀರ್ ( ಸೈನಾ)
    ಅತ್ಯುತ್ತಮ ನಿರ್ದೇಶಕ ; ಸಚ್ಚಿದಾನಂದ‌‌ ಕೆ.ಆರ್ ( ಎಕೆ ಅಯ್ಯಪ್ಪನ್ ಕೋಶಿಯಾಮ್ ,- ಮಲೆಯಾಳಂ