ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಶಿವನಗರದಲ್ಲಿಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಬಿಜೆಪಿ ಅಭ್ಯರ್ಥಿ ಎಸ್. ಸುರೇಶ್ ಕುಮಾರ್ ಪರವಾಗಿ ಬೃಹತ್ ರೋಡ್ ಶೋ ನಡೆಸಿದರು. ಮಾಜಿ ಶಾಸಕ ನೆ.ಲ.ನರೇಂದ್ರ ಬಾಬು ,ಮಾಜಿ ಉಪಮಹಾಪೌರ ಕೆ.ರಂಗಣ್ಣ, ಬಿಜೆಪಿ ಮುಖಂಡರು, ಚಲನಚಿತ್ರ ನಿರ್ಮಾಪಕ ಗಂಗಾಧರ್ ಸೇರಿದಂತೆ ಸಾವಿರಾರು ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.