ಇಂದು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಬಿಳೇಕಹಳ್ಳಿಯ ಮುಲ್ಕಿ ಸುಂದರ ರಾಮಶೆಟ್ಟಿ ಸಭಾಂಗಣದಲ್ಲಿ ಸಮನ್ವಯ ಬೆಂಗಳೂರು ಹಾಗೂ ಬೊಮ್ಮನಹಳ್ಳಿ ಮಲಯಾಳಿ ಸಂಘದ ವತಿಯಿಂದ ಆಯೋಜಿಸಿದ್ದ “ಕುಟುಂಬ ಸಮಾಗಮ” ಕಾರ್ಯಕ್ರಮದಲ್ಲಿ ಅಭ್ಯರ್ಥಿ ಎಂ. ಸತೀಶ್ ರೆಡ್ಡಿ ಪಾಲ್ಗೊಂಡು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಬದಲ್ಲಿ ಚಲನಚಿತ್ರ ನಟರು ಹಾಗೂ ಕೇರಳದ ಮಾಜಿ ಸಂಸದರಾದ ಭರತ್ ಸುರೇಶ್ ಗೋಪಿ ರವರು,ಕೇರಳದ ಮಾಜಿ ಬಿಜೆಪಿ ಅಧ್ಯಕ್ಷರಾದ ಕೃಷ್ಣದಾಸ್ ರವರು,ಬಿಜೆಪಿ ಮಂಡಲ ಅಧ್ಯಕ್ಷರಾದ ಶಿವಾಜಿ ರವರು, ಬೊಮ್ಮನಹಳ್ಳಿ ಬಿಜೆಪಿ ಪ್ರಭಾರಿಗಳಾದ ಅಶ್ವತ್ಥ ನಾರಾಯಣ ರವರು, ಸಮುದಾಯದ ಮುಖಂಡರು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.