
ಮುನವಳ್ಳಿ,ಆ3: ಪಟ್ಟಣದ ಜೆ.ಎಸ್.ಪಿ ಸಂಘದ ಸಭಾಭವನದಲ್ಲಿ ಜನತಾ ಶಿಕ್ಷಣ ಪ್ರಸಾರಕ ಸಂಘದ 67 ನೇ ಸಂಸ್ಥಾಪನಾ ದಿನಾಚರಣೆ ಜರುಗಿತು.
sಸಂಘದ ಗೌರವ ಕಾರ್ಯದರ್ಶಿ ವ್ಹಿ.ಎಸ್.ಯಕ್ಕುಂಡಿ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಕೋಶಾಧ್ಯಕ್ಷ ರವೀಂದ್ರ ಯಲಿಗಾರ ಮಾತನಾಡಿ ಶಿಕ್ಷಣ ಸಂಸ್ಥೆಗಳು ಬೆಳೆಯಬೇಕಾದರೆ ಸೇವಾಮನೋಭಾವ ಬಹಳ ಮುಖ್ಯವಾಗಿದೆ ಆ ನಿಟ್ಟಿನಲ್ಲಿ ನಮ್ಮ ಸಂಸ್ಥೆಯ ಎಲ್ಲ ಆಡಳಿತ ಮಂಡಳಿಯವರು ಶ್ರಮಿಸುತ್ತಿದ್ದಾರೆ. ಮುಂಬರುವ ದಿನಮಾನಗಳಲ್ಲಿ ಈ ಸಂಸ್ಥೆ ಇನ್ನೂ ಎತ್ತರಕ್ಕೆ ಬೆಳೆದು ಹೊಸದಿಗಂತ ಕಾಣಲಿ ಎಂದರು.
ಗೌರವ ಡಾಕ್ಟರೇಟ ಪಡೆದ ಡಾ. ಎ.ಎಸ್.ಅಮೋಘಿಮಠ, ಡಾ. ಎಂ.ಎಸ್.ಬಾಗೇವಾಡಿ ಡಾ. ಜಯಶ್ರೀ ಕೆ. ಬಡಿಗೇರ, ಮೋಹನ ಕಾಮಣ್ಣವರ, ಇವರನ್ನು ಸನ್ಮಾನಿಸಲಾಯಿತು ಸನ್ಮಾನಿತ ಪರ ಅಮೋಗಿಮಠ ಹಾಗೂ ಬಾಗೇವಾಡಿ ಮಾತನಾಡಿದರು. ಇ ಶಿಕ್ಷಣ ಸಂಸ್ಥೆಯಲ್ಲಿ ಪ್ರಾರಂಭದಲ್ಲಿ ಎಂಟು ಮಕ್ಕಳಿಂದ ಪ್ರಾರಂಭಗೊಂಡ ಈ ಸಂಸ್ಥೆ 3000 ಮಕ್ಕಳು ಹಾಗೂ 200 ಶಿಕ್ಷಕರು ಇ ಸಂಸ್ಥೆಯಲ್ಲಿ ಇರುವದು ನಮ್ಮ ಹೆಮ್ಮೆಯ ಸಂಗತಿ ಎಂದರು.
ಸಂಸ್ತೆಯ ಚೇರಮನ್ನ ಎಂ.ಆರ್ ಗೋಪಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು, ಸುಧಾಕರ ರೇಣಕೆ, ಎ.ಎಂ ಕರೀಕಟ್ಟಿ, ವಿ.ಎಂ.ಸೂರ್ಯವಂಶಿ, ಎ.ಪಿ.ಲಂಬೂನವರ, ಅಮಿತ ಅಬ್ಬಾರ, ಎಫ್ ಬಿ ಭೂವಿ, ಎಂ ಜಿ ಹೊಸಮಠ, ಆರ್ ಎಚ್ ಪಾಟೀಲ, ಎಸ್ ಬಿ ಹಿರಲಿಂಗಣ್ಣವರ, ಉಮೇಶ ಚುಳಕಿ, ಪ್ರಕಾಶ ಕಮಲಾಪೂರ, ಅಣ್ಣಪ್ಪ ಶ್ಯಾನಭೋಗ, ಶ್ರೀಶೈಲ ಗೋಪಶೆಟ್ಟಿ, ಸಿಬ್ಬಂದಿವರ್ಗ ಹಾಗೂ ಇತರರು ಉಪಸ್ಥಿತರಿದ್ದರು.
ಎಂ. ಎ ಕಮತಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಯಲಿಗಾರ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದ ಮನರಂಜನೆ ಕಾರ್ಯಕ್ರಮ ಜರುಗಿತು.