67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಪ್ರಕಟ:ಕಂಗನಾ, ಮನೋಜ್ ಬಾಜಪೆಯಿ, ಧನುಷ್ ಅತ್ಯುತ್ತಮ ನಟ‌ ನಟಿ

ನವದೆಹಲಿ,ಮಾ,22-‌ ಸಿನಿಮಾಗೆ ಕೊಡಮಾಡುವ 67ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟವಾಗಿದ್ದು, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ‘ಚಿಚೋರ್’ ಅತ್ಯುತ್ತಮ ಹಿಂದಿ ಚಲನಚಿತ್ರ ವಿಭಾಗದಲ್ಲಿ ರಾಷ್ಟ್ರ ಪ್ರಶಸ್ತಿ ಗಳಿಸಿದೆ.

2019 ನೇ ಸಾಲಿನ ರಾಷ್ಟ್ರೀಯ ಚಲನಚಿತ್ರ ಪುರಸ್ಕಾರ ಇದಾಗಿದ್ದು ಮಣಿ ವರ್ಣಿಕಾ `ದಿ ಕ್ವೀನ್ ಆಫ್ ಝಾನ್ಸಿ’ ಮತ್ತು ಪಂಗಾ ಚಿತ್ರದ ನಟನೆಗಾಗಿ ಕಂಗನಾ ರಣಾವತ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅತ್ಯುತ್ತಮ ನಟ ಪ್ರಶಸ್ತಿಯನ್ನು ಮನೋಜ್ ಬಾಜಪೆಯಿ ಹಾಗೂ ಧನುಷ್ ಹಂಚಿಕೊಂಡಿದ್ದಾರೆ.

ಅತ್ಯುತ್ತಮ ಚಿತ್ರಸ್ನೇಹಿ ರಾಜ್ಯವೆಂಬ ಹೆಗ್ಗಳಿಕೆಗೆ ಸಿಕ್ಕಿಂ ಪಾತ್ರವಾಗಿದೆ. ಹೇಮಂತ್ ಗಾಬಾ ಅವರ ಆನ್ ಇಂಜಿನಿಯರ್ಡ್ ಡ್ರೀಮ್ ಚಿತ್ರಕ್ಕೆ ನಾನ್ ಫೀಚರ್ ವರ್ಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಲಭಿಸಿದೆ

ಕನ್ನಡದ ಅಕ್ಷಿಗೆ ಪ್ರಶಸ್ತಿ:

ಮನೋಜ್ ಕುಮಾರ್ ನಿರ್ದೇಶನದ `ಅಕ್ಷಿ’ ಅತ್ಯುತ್ತಮ ಕನ್ನಡ ಚಿತ್ರ ಪುರಸ್ಕಾರಕ್ಕೆ ಭಾಜನವಾಗಿದೆ.

ಪಿ.ಆರ್ ರಾಮದಾಸ್ ನಾಯ್ಡು ಅವರು ಬರೆದ ಜಾಗತಿಕ ಸಿನೆಮಾ ವಿಕಾಸ ಪ್ರೇರಣೆ-ಪ್ರಭಾವ ಅತ್ಯುತ್ತಮ ಸಿನಿಮಾ ಪುಸ್ತಕ ವಿಭಾಗದಲ್ಲಿ ದ್ವಿತೀಯ ಪುರಸ್ಕಾರ ಪಡೆದಿದೆ.

ವೈಲ್ಡ್ ಕರ್ನಾಟಕ ಇಂಗ್ಲೀಷ್ ಸಾಕ್ಷ್ಯಚಿತ್ರಕ್ಕೆ ಡೇವಿಡ್ ಅಟೆನ್ ಬೋರೋ ಅವರು ನೀಡಿದ ಹಿನ್ನಲೆ ಧ್ವನಿ ಪುರಸ್ಕಾರಕ್ಕೆ ಭಾಜನವಾಗಿದೆ.

ಸೋಹಿನಿ ಚಟ್ಟೋಪಾಧ್ಯಾಯ ಅವರು ಅತ್ಯುತ್ತಮ ಸಿನಿಮಾ ವಿಮರ್ಶಕ ಪುರಸ್ಕಾರ ಪಡೆದಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ನಡೆಯುತ್ತಿದ್ವು. ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅನಿರ್ದಿಷ್ಟವಾಗಿ ವಿಳಂಬವಾಗಿತ್ತು.