ಗುಜರಾತ್‌ನ ಅಮುಲ್ ಬ್ರಾಂಡ್‌ನ್ನು ನಂದಿನಿಯೊಂದಿಗೆ ವಿಲೀನಗೊಳಿಸುತ್ತಿರುವುದನ್ನು ಖಂಡಿಸಿ, ಅಮುಲ್ ಬ್ರಾಂಡ್‌ಗೆ ನಿಷೇಧ ಹೇರುವಂತೆ ಒತ್ತಾಯಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಗರದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್, ಪಕ್ಷದ ಮುಖಂಡರುಗಳಾದ ಬಿ. ಮಂಜುನಾಥ್, ಹೇಮರಾಜು, ಅನಿಲ್ ಕುಮಾರ್, ಪ್ರಕಾಶ್, ವೆಂಕಟೇಶ್, ಚಂದ್ರಶೇಖರ್ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.