ಹಸಿರುಕ್ರಾಂತಿಯ ಹರಿಕಾರ,ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನರಾಮ್ ರವರ ಜಯಂತ್ಯೋತ್ಸವದ ನಿಮಿತ್ತ ಸಮತಾ ಸೇನಾ ಕರ್ನಾಟಕ,ಶ್ರೀ ಸಮಗಾರ ಹರಳಯ್ಯ ಸಮಾಜ ಅಭಿವ್ರದ್ದಿ ಮಹಾಮಂಡಳ ಲಿಡಕರ ಚರ್ಮಕುಟೀರಕಾರರ ಸಂಘ ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ ವತಿಯಿಂದ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯ ಆವರಣದಲ್ಲಿರುವ ಡಾ:ಬಾಬುಜೀರವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಮಾಲಾರ್ಪಣೆ ಮಾಡಲಾಯಿತು. ಸಮತಾ ಸೇನಾ ರಾಜ್ಯಾಧ್ಯಕ್ಷ ಗುರುನಾಥ ಉಳ್ಳಿಕಾಶಿ, ಮುಖಂಡರಾದ ಮೋಹನ ಹಿರೇಮನಿ, ಪ್ರೇಮನಾಥ ಚಿಕ್ಕತುಂಬಳ, ಶಾಂತರಾಜ್ ಪೆÇೀಳ ಸೇರಿದಂತೆ ದಲಿತ ಮುಖಂಡರು ಉಪಸ್ಥಿತರಿದ್ದರು.