ನಗರದ ಇಂದಿರಾ ಗಾಜಿನ ಮನೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ಸಾಮಾಜಿಕ ನ್ಯಾಯ ಹಾಗೂ ಹಸಿರು ಕ್ರಾಂತಿಯ ಹರಿಕಾರರು, ಮಾಜಿ ಉಪ ಪ್ರಧಾನಿಗಳಾದ ಡಾ.ಬಾಬು ಜಗಜೀವನ್ ರಾಮ್ ಅವರ.116ನೇ ಜಯಂತಿಯಂದು ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವಪೂರ್ವಕ ನಮನ ಸಲ್ಲಿಸಲಾಯಿತು. ಬಿಜೆಪಿ ರಾಜ್ಯ ಪ್ರ. ಕಾರ್ಯದರ್ಶಿ ರವಿಕುಮಾರ್, ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ, ಬಸವರಾಜ್ ಅಮ್ಮಿನಭಾವಿ, ಚಂದ್ರಶೇಖರ್ ಗೋಕಾಕ್, ಡಾಕ್ಟರ್ ಕ್ರಾಂತಿ ಕಿರಣ್, ಶ್ರೀಧರ್ ಹಳ್ಳಿ, ಪರಶುರಾಮ್ ಪೂಜಾರ್, ನಾಗರಾಜ್ ಟಗರಗುಂಟಿ, ರೇಣುಕಪ್ಪ ಕೆಲೂರ್, ಎಲ್ಲಪ್ಪ ಬಾಗಲಕೋಟ್, ಕವಿತಾ ನಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.