ಪತ್ರಕರ್ತರೊಂದಿಗೆ ಅನುಚಿತ ವರ್ತನೆ ತೋರಿದ ಅರೋಪದ ಹಿನ್ನಲೆಯಲ್ಲಿ, ಕೆ.ಅರ್.ನಗರ ತಾಲೂಕು ಪತ್ರಕರ್ತರ ಸಂಘ ದಿಂದ ಪುರಸಭೆ ಮುಖ್ಯಾಧಿಕಾರಿ ಕೆ.ಶಿವಣ್ಣ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಘಟನೆಯ ಸಂಪೂರ್ಣ ವರದಿ ಪಡೆದು ಪುರಸಭೆ ಮುಖ್ಯಾಧಿಕಾರಿ ಕೆ.ಶಿವಣ್ಣ ವಿರುದ್ದ ಸೂಕ್ತ ಕ್ರಮಗಳನ್ನು ತೆಗೆದು ಕೊಳ್ಳುವುದಾಗಿ ಸಚಿವರು ಈ ವೇಳೆ ಭರವಸೆ ನೀಡಿದರು.