ಅಂಡಮಾನ್ ದ್ವೀಪದಲ್ಲಿ ಭೂಕಂಪನ

ನವದೆಹಲಿ, ಏ.೧- ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಶನಿವಾರ ಮುಂಜಾನೆ ಪ್ರಬಲ ಭೂಕಂಪನ ಸಂಭವಿಸಿದ್ದು, ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ ೪.೦ ದಾಖಲಾಗಿದೆ.

ಈ ಕುರಿತು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ಮಾಹಿತಿ ನೀಡಿದ್ದು, ಇಂದು ಮುಂಜಾನೆ ಸುಮಾರಿಗೆ ಪೋರ್ಟ್‌ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ೪.೦ ತೀವ್ರತೆಯ ಭೂಕಂಪವು ಸಂಭವಿಸಿದೆ ಎಂದು ತಿಳಿಸಿದೆ.

ಅದರೆ, ಈವರೆಗೆ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ ಎಂದು ಮಾಹಿತಿ ನೀಡಲಾಗಿದೆ.

ಅದೇ ರೀತಿ, ಶನಿವಾರ ಮುಂಜಾನೆ ೩:೦೪ಕ್ಕೆ ನೇಪಾಳದ ಕಠ್ಮಂಡುವಿನ ವಾಯುವ್ಯಕ್ಕೆ ೧೦ ಕಿಲೋಮೀಟರ್ ದೂರದಲ್ಲಿ೩.೫ ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪವು ೨೫ ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.