ಹುಬ್ಬಳ್ಳಿಯ ನೇಕಾರನಗರದ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಸಮಾಜ ಬನಶಂಕರಿ ಸೇವಾ ಟ್ರಸ್ಟ್ ನಿಂದ ಆದ್ಯ ವಚನಕಾರರ ದೇವರ ದಾಸಿಮಯ್ಯ ಅವರ 1044 ನೇ ಜಯಂತೋತ್ಸವ ಆಚರಿಸಲಾಯಿತು. ದೇವಾಂಗ ಸಮಾಜದ ಗಣ್ಯರಾದ ಸಂಕಣ್ಣ ಹೊನ್ನಳ್ಳಿ, ಶಿವು ಕೊಳದೂರ, ರಾಮಚಂದ್ರ ಕಂಗೋರಿ, ಪ್ರಭುಕರ ಬೆಂಟಗೇರಿ, ಮಹಾದೇವ ತೋಪಲಗಟ್ಟಿ, ಗುರು ಕರೋಸಿ, ವೀರುಪಾಕ್ಷಪ್ಪ ಚೌಡಾಪೂರ, ಜಗದೀಶ ಸುಳ್ಳಿಕೇರಿ, ಮಹದೇವ ಶಿರಹಟ್ಟಿ, ಸರೋಜಾ ಚಿಟ್ಟಾ, ಮಂಜುಳಾ ಮಂಗಳೂರು, ಸುಜಾತಾ ಕೊಳದೂರ, ಸರಸ್ವತಿ ಸೂಳಿಕೇರಿ, ಭಾಗ್ಯ ಬೆಟಗೇರಿ, ಗೀಜಾ ಕರ್ಜಗಿ, ವಿದ್ಯಾ ಕುಂಚೂರ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಮಹಿಳಾ ಸಾಧಕರು ಹಾಗೂ ಲೆಕ್ಕಪರಿಶೋಧಕಿ ಕು.ಸಹನಾ ಬಾಗೋಡಿ ಅವರನ್ನು ಸನ್ಮಾನಿಸಲಾಯಿತು.