ಹುಬ್ಬಳ್ಳಿಯ ಜಯಚಾಮರಾಜನಗರದ ಹು-ಧಾ ಪಾಲಿಕೆ ನೌಕರರ ಸಭಾಭವನದಲ್ಲಿ ಅಖಿಲ ಕರ್ನಾಟಕ ಬಸವವನ ಬಳಗದ ಆಶ್ರಯದಲ್ಲಿ ಪದ್ಮಭೂಷಣ ಡಾ. ಶ್ರೀ ಶಿವಕುಮಾರ್ ಸ್ವಾಮಿಗಳ 116 ನೇ ಜಯಂತ್ಯೋತ್ಸವದ ಅಂಗವಾಗಿ ನಡೆದ ದಾಸೋಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಮಾಜ ಸೇವಕ ರಮೇಶ ಮಹದೇವಪ್ಪನವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ದಿನೇಶ ಶೆಟ್ಟಿ, ಆನಂದ ಕಮತಗಿ, ಶಿವಬಸಪ್ಪ ಕೋರಿ, ಸಿದ್ರಾಮಪ್ಪ ಹರ್ಲಾಪೂರ, ಶೋಭಾ ಕಾಗಿ, ಶಾಂತಾ ಸೂರಗಾವಿ, ಡಾ. ಪ್ರೇಮಾ ಗಿರೀಮಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.