ಥೈಲ್ಯಾಂಡ್‌ನ ಅಯುಥಾದಲ್ಲಿ ನಡೆದ ೫ನೇ ಅಂತಾರಾಷ್ಟ್ರೀಯ ಮಾರ್ಷಲ್ ಆರ್ಟ್ಸ್ (ಕಿಕ್ ಬಾಕ್ಸಿಂಗ್) ಪಂದ್ಯದಲ್ಲಿ ಟೀಂ ಇಂಡಿಯಾದ ದರ್ಶನ್ ಶ್ರೀನಿವಾಸ್ ೫೫ ಕೆಜಿ ಜೂನಿಯರ್ ವಿಭಾಗದಲ್ಲಿ ಥೈಲ್ಯಾಂಡ್‌ನ ಫೈಟರ್ ತೀರಾಫತ್ ಪುಯಾಯುಯಾಂಗ್ ವಿರುದ್ಧ ಗೆಲುವು ಸಾಧಿಸಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ಗಳಿಸಿದ್ದಾರೆ. ಇವರು ಈಗಾಗಲೇ ೨ ಅಂತಾರಾಷ್ಟ್ರೀಯ, ೨ ವಿಶ್ವ ಚಾಂಪಿಯನ್, ೨೦ಕ್ಕೂ ಹೆಚ್ಚು ರಾಜ್ಯ ಮತ್ತು ಜಿಲ್ಲಾ ಮಟ್ಟದ ಪದಕಗಳನ್ನು ಪಡೆದಿದ್ದಾರೆ.