ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಸಂಸತ್ ಸದಸ್ಯ ಸ್ಥಾನ ಅನರ್ಹಗೊಳಿಸಿರುವುದನ್ನು ಖಂಡಿಸಿ ನಗರದ ಕಾಂಗ್ರೆಸ್ ಭವನದಲ್ಲಿ ಎಸ್.ಸಿ, ಎಸ್.ಟಿ, ಓಬಿಸಿ ಮೈನಾರಿಟಿ ಕಮಿಟಿಗಳ ವತಿಯಿಂದ ಇಂದು ಪ್ರತಿಭಟನೆ ನಡೆಸಲಾಯಿತು. ಎಸ್.ಸಿ. ಘಟಕದ ರಾಜ್ಯಾಧ್ಯಕ್ಷ ಧರ್ಮಸೇನಾ, ಎಂಎಲ್‌ಸಿ ನಾಗರಾಜ್ ಯಾದವ್, ಜಿಲ್ಲಾ ಅಧ್ಯಕ್ಷ ಜಿ. ಶೇಖರ್, ಉತ್ತರ ಜಿಲ್ಲಾ ಎಸ್.ಸಿ. ವಿಭಾಗದ ಅಧ್ಯಕ್ಷ ಕೋಗಿಲು ವೆಂಕಟೇಶ್, ಬೆಂಗಳೂರು ಕೇಂದ್ರ, ಉತ್ತರ ದಕ್ಷಿಣ ಜಿಲ್ಲೆಯ ಜಿಲ್ಲಾಧ್ಯಕ್ಷರುಗಳು, ಕಾರ್ಯಕರ್ತರು ಭಾಗವಹಿಸಿದ್ದರು.