ರೈತಸೇನಾ ಕರ್ನಾಟಕ (ರಿ) ಮಹದಾಯಿ ಮತ್ತು ಕಳಸಾ-ಬಂಡೂರಿ ಹೋರಾಟ ಸಮನ್ವಯ ಸಮೀತಿ ನರಗುಂದ ನೇತೃತ್ವದಲ್ಲಿ ವೀರೇಶ ಸೊಬರದಮಠ ಸ್ವಾಮಿಗಳ ಮುಖಂಡತ್ವದಲ್ಲಿ ಮಲಪ್ರಭಾ ಅಚ್ಚುಕಟ್ಟು ವ್ಯಾಪ್ತಿಯ ನಾಲ್ಕು ಜಿಲ್ಲೆಯ ಮಹದಾಯಿ ಹೋರಾಟಗಾರರು ಹುಬ್ಬಳ್ಳಿಯ ಶ್ರೀ ಮೂರುಸಾವಿರ ಮಠದ ಆವರಣದಲ್ಲಿ ನೆರೆದು ಅಲ್ಲಿನ ಕತೃ ಗದ್ದುಗೆಗೆ ಪೂಜೆ ಸಲ್ಲಿಸಿ ಕಾಶಿ ಯಾತ್ರೆ ಪ್ರಾರಂಭಿಸಿದರು,ಈ ಸಂದರ್ಭದಲ್ಲಿ ಡಾ. ಮಹೇಶ ನಾಲವಾಡ ನರಗುಂದ ಮಹದಾಯಿ ಹೋರಾಟದ ವೀರಬಸಪ್ಪ ಹೂಗಾರ, ಫಕೀರಪ್ಪ ಜೋಗನ್ನವರ, ಪರಶುರಾಮ ಜಂಬಗಿ, ಗುರು ರಾಯನಗೌಡ್ರ, ಮಲ್ಲಣ್ಣ ಅಲೇಕಾರ, ಮುತ್ತು ಪಾಟೀಲ, ಹನಮಂತ ಮಡಿವಾಳರ, ಹನಮಂತ ಬೆಳದಡಿ,ಲಚ್ಚಪ್ಪ ಡೊಂಬರಳ್ಳಿ, ನಿಂಗಪ್ಪ ಮಳಲಿ ಡಾ:ವೆಂಕನಗೌಡ ಪಾಟೀಲ, ಶರಣಗೌಡ ಪಾಟೀಲ, ವಿನಯ ಹೊಸಗೌಡ್ರ, ಅಪ್ಪಣ್ಣ ಹಿರಗನ್ನವರ, ಸಿ.ಎಸ್.ನವಲಗುಂದ. ಉಪಸ್ಥಿತರಿದ್ದರು.