ಉತ್ತರ ಕನ್ನಡ ಜಿಲ್ಲೆ ಎಸ್.ಸಿ ಮೋರ್ಚಾ ಸಂಘಟನಾತ್ಮಕ ಸಮಾವೇಶಕ್ಕೆ ಆಗಮಿಸಿದ ಬಿಜೆಪಿ ಎಸ್.ಸಿ. ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರಾದ ಲಾಲ್‍ಸಿಂಗ್ ಆರ್ಯ, ರಾಜ್ಯಾಧ್ಯಕ್ಷರಾದ ಚಲವಾದಿ ನಾರಾಯಣಸ್ವಾಮಿ, ರಾಷ್ಟ್ರೀಯ ಕಾರ್ಯದರ್ಶಿ ಎಸ್. ಕುಮಾರ್ ಅವರು ಹು-ಧಾ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ್ ಪೂಜಾರ್ ಅವರ ಮನೆಯಲ್ಲಿ ಉಪಹಾರ ಸೇವಿಸಿದರು. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಮಹೇಂದ್ರ ಕೌತಾಳ, ಬಸವರಾಜ ಅಮಿನಬಾವಿ, ವೆಂಕಟೇಶ್ ಮೇಸ್ತ್ರಿ, ಎಸ್.ಎನ್. ಬಿದರಳ್ಳಿ, ಅಮಿತ್ ಪೂಜಾರ್, ಮಧುಚಂದ್ರ ಅಚ್ಚಳ್ಳಿ, ಸಾಹುಲ್ ಪೂಜಾರ್, ಸತೀಶ ಸಾತಪತಿ, ಪ್ರಶಾಂತ್ ಪೂಜಾರ ಇದ್ದರು.