
ನಗರದ ವಾರ್ಡ ನಂ. 68 ರಲ್ಲಿ ಶಾಲಾ ಮಕ್ಕಳಿಗೆ ಶ್ರೀ ವೆಂಕಟೇಶ ಮೇಸ್ತ್ರೀ ಅಭಿಮಾನಿಗಳ ಬಳಗದಿಂದ ಉಚಿತ ನೋಟಬುಕ್, ಪೆನ್ಸಿಲ್ ಕಿಟ್ ವಿತರಿಸಲಾಯಿತು. ಪಾಲಿಕೆ ಸದಸ್ಯರಾದ ಶ್ರೀಮತಿ ಚಂದ್ರಿಕಾ ವೆಂಕಟೇಶ ಮೇಸ್ತ್ರಿ, ಅನುರಾಧಾ ಚಿಲ್ಲಾಳ, ಪೂರ್ಣಿಮಾ ಸಿಂಧಿ, ಶೋಭಾ ನಾಕೋಡ, ಲೀಲಾ ಸಿಂಧಿ, ಶಾಂತಕ್ಕ ಹೆಬ್ಬಳ್ಳಿ, ಪ್ರಮೀಳಾ ಕೊಠಾರಿ, ಸುವರ್ಣ ಜಂಗಮಗೌಡರ, ಬಸವರಾಜ ಜಾಬಿನ್, ಗೌರಮ್ಮ ಸರೋಜಾ, ಲಕ್ಷ್ಮೀ ಉಪಸ್ಥಿತರಿದ್ದರು.