ಜಯಂತಿ ಸೇವಾ ಟ್ರಸ್ಟ್ ಹಾಗೂ ನ್ಯಾಷನಲ್ ಹ್ಯೂಮನ್ ರೈಟ್ ಪ್ಯಾನಲ್ ಸಹಯೋಗದೊಂದಿಗೆ ನಗರದ ಕನ್ನಡ ಭವನದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಚಲನಚಿತ್ರ ಹಿರಿಯ ಗಾಯಕಿ ಲತಾ ಹಂಸಲೇಖಾರಿಗೆ ಸ್ವರ ಸರಸ್ವತಿ ಬಿರುದು ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಡಾ. ನೀರಜ್‌ನಾಗೇಂದ್ರ ಕುಮಾರ್, ಡಾ. ವೆನ್ನಿಲಾ, ಎಂ.ಎಸ್. ಜಗನ್ನಾಥ್, ಪಳನಿ ಡಿ. ಸೇನಾಪತಿ, ಸ್ಟಾನಿಶ್‌ರಾಜ. ಐ, ವೈ.ಬಿ. ರಮೇಶ್ ಕೋಟೆ, ನಟಿಯರಾದ ಕವಿತಾ ಶೆಟ್ಟಿ, ಮಂಜುಳಾ ಗೌಡ ಮತ್ತಿತರರು ಭಾಗವಹಿಸಿದ್ದರು.