ಧಾರವಾಡದ ಪಶುಪಾಲನಾ ತರಬೇತಿ ಕೇಂದ್ರದಲ್ಲಿ ಪಶು ಸಖಿಯರಿಗೆ ಸಮಗ್ರ ಪಶುಸಂಗೋಪನೆಯ ತಾಂತ್ರಿಕ ವಿಷಯಗಳ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಎಮ್. ವಿ. ಚಳಗೇರಿ ಅವರು ಉದ್ಘಾಟಿಸಿದರು. ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ. ಉಮೇಶ ಕೊಂಡಿ, ಸಂಜೀವಿನಿ ಡಿ.ಪಿ.ಎಂ. ವಿನೋದ ಕಂಟಿ, ಪಾಲಿಕ್ಲಿನಿಕ್ ಉಪನಿರ್ದೇಶಕ ಡಾ. ಪ್ರಮೋದ ಮೂಡಲಗಿ ಮತ್ತಿತರರು ಇದ್ದರು.