
ಕರ್ನಾಟಕ ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಮಂಡಳಿಯಿಂದ ಶ್ರಮಿಕ್ ಸಂಜೀವಿನಿ ಸಂಚಾರಿ ಆರೋಗ್ಯ ಘಟಕದ ತಂಡವು ಶಿಗ್ಗಾವ ತಾಲೂಕಿನ ಗುಡ್ಡದ ಚನ್ನಾಪೂರ ಮತ್ತು ಹಳೆ ಬಂಕಾಪುರದಲ್ಲಿ ಕಟ್ಟಡ ಕಾರ್ಮಿಕರು ಮತ್ತು ಅವರ ಅವಲಂಬಿತರಿಗಾಗಿಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಶಿಬಿರವನ್ನು ಏರ್ಪಡಿಸಲಾಗಿತ್ತು. ವೈದ್ಯರಾದ ಬಿ.ಎಸ್. ಗೌಡರ್ ಗ್ರಾಮಸ್ತರು ಹಾಗೂ ಸ್ಕೋಡವೆಸ್ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.