ಭಾರತ ಸರ್ಕಾರ ಜವಳಿ ಸಚಿವಾಲಯದ ಕರಕುಶಲ ಅಭಿವೃದ್ಧಿ ಆಯುಕ್ತರ ಕಚೇರಿ ಆಯೋಜಿಸಿದ್ದ ಡಿಸಿ (ಕರಕುಶಲ), ಜಿಐ ನೋಂದಣಿ, ಇ-ಕಾಮರ್ಸ್, ಜೆಮ್ ಪೆÇೀರ್ಟಲ್, ಜಿಎಸ್‍ಟಿ ಯೋಜನೆಗಳ ಅರಿವು ಕುರಿತು ಒಂದು ದಿನದ ವಿಚಾರ ಸಂಕಿರಣವು ಧಾರವಾಡದ ಹೋಟೆಲ್ ಗ್ರ್ಯಾಂಡ್ ಪ್ಲಾಜಾದಲ್ಲಿ ಜರುಗಿತು. ಜಿಲ್ಲಾ ವ್ಯವಸ್ಥಾಪಕ ಪ್ರಭುದೇವ ಎನ್.ಜಿ. ಉದ್ಘಾಟಿಸಿದರು. ಸಿಡಾಕ್ ಜಂಟಿ ನಿರ್ದೇಶಕ ಚಂದ್ರಶೇಖರ ಎಚ್.ಅಂಗಡಿ, ವಿಟಿಪಿಸಿ ಸಹಾಯಕ ನಿರ್ದೇಶಕ ಟಿ.ಎಸ್. ಮಲ್ಲಿಕಾರ್ಜುನ, ಹುಬ್ಬಳ್ಳಿ ಎಂಎಸ್‍ಎಂಇ ಸಹಾಯಕ ನಿರ್ದೇಶಕ ಮಹಮ್ಮದ್ ಅರ್ಷದ್, ಕರಕುಶಲ ಸೇವಾ ಕೇಂದ್ರದ ಸಹಾಯಕ ನಿರ್ದೇಶಕ ದರ್ಶನ ರಾಘವನ್ ಭಾಗವಹಿಸಿದ್ದರು.