ಮಹಿಳಾ ದಿನಾಚರಣೆಯನ್ನು ನಗರದ ಆರ್. ಎನ್. ಶೆಟ್ಟಿ ರಸ್ತೆ ಹೇಮರೆಡ್ಡಿ ಮಲ್ಲಮ್ಮ ಕಾಲೋನಿ ಧನಶ್ರೀ ಮಹಿಳಾ ಮಂಡಲ ವತಿಯಿಂದ ಪಾಲಿಕೆ ಸದಸ್ಯರಾದ ಶೀಲಾ ಮಂಜುನಾಥ ಕಾಟಕರ ಅವರ ಮನೆಯಲ್ಲಿ ಆಚರಿಸಲಾಯಿತು. ಹಿರಿಯರಾದ ಶ್ರೀಮತಿ ರತ್ನಾಬಾಯಿ ಮಾರುತಿ ಕಾಟಕರ ಹಾಗೂ ಮಹಿಳೆಯರಿಗೆ ಸನ್ಮಾನಿಸಲಾಯಿತು. ಸುನಂದಾ ಕೋಬ್ಬಿನ, ಶಶಿಕಲಾ, ನಂದಾ, ಮಂಜುಳಾ, ಲಕ್ಷ್ಮಿಬಾಯಿ, ಗೀತಾ ಮೇಟ್ಟಿ, ವಿಜಯಾ ಬದ್ದಿ ಮತ್ತಿತರರು ಉಪಸ್ಥಿತರಿದ್ದರು.