65 ಲಕ್ಷ ಲಾಭದಲ್ಲಿ ಕನ್ಯಕಾ ಸೌಹಾರ್ದಸಂಘ

 

ಹಿರಿಯೂರು: ಸೆ. 19- ನಗರದ ಕನ್ಯಕಾ  ಸೌಹಾರ್ದ ಸಹಕಾರಿ ಸಂಘವು ಈ ಸಾಲಿನಲ್ಲಿ 65 ಲಕ್ಷ ಲಾಭಗಳಿಸಿ ಪ್ರಗತಿಪಥದಲ್ಲಿ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷರಾದ  ಈ.ಆರ್.ರಮೇಶ್ ಬಾಬು ಹೇಳಿದರು. ಇಲ್ಲಿನ  ಕನ್ಯಕಾ ಮಹಲ್ ನಲ್ಲಿ ಆಯೋಜಿಸಿದ್ದ ಸಂಘದ 2021-22ನೇ ಸಾಲಿನ  ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸಕ್ತ ಸಾಲಿನಿಂದ ಈ ಹಿಂದೆ ಸಮಯಕ್ಕೆ ಸರಿಯಾಗಿ ಪಾವತಿಸಿದ ಕಂತುಗಳಿಗೆ ನೀಡುತ್ತಿದ್ದ ಸೋಡಿ ಶೇ 2% ರಿಂದ 4% ಕ್ಕೆ ಹೆಚ್ಚಿಸಿ ಸಾಲಗಾರ ಸದಸ್ಯರಿಗೆ ಅನುಕೂಲ ಮಾಡಿಕೊಟ್ಟಿರುತ್ತೇವೆ ಸದಸ್ಯರು ಸದುಪಯೋಗಪಡಿಸಿಕೊಳ್ಳಿ ಎಂದರು. ಬ್ಯಾಂಕಿನ ಪ್ರಗತಿಗೆ ಸಹಕರಿಸಿದ ಎಲ್ಲರಿಗೂ ಹೃದಯ ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಸಂಘದ ಅಭಿವೃದ್ಧಿಗೆ ಸಹಕರಿಸಿದ ಸಹಕಾರಿ ಬಂಧುಗಳಿಗೆ ಸನ್ಮಾನಿಸಲಾಯಿತು. ಆರ್ಯ ವೈಶ್ಯ ಸಮಾಜದ ಗೌರವ ಅಧ್ಯಕ್ಷರಾದ ಕೆ ಆರ್ ವೆಂಕಟೇಶ್ ,ಅಧ್ಯಕ್ಷರಾದ ಆರ್ ಪ್ರಕಾಶ್ ಕುಮಾರ್, ವಾಗ್ದೇವಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಕೆ ವಿ ಅಮರೇಶ್, ವಾಸವಿ ಯುವಜನ ಸಂಘದ ಅಧ್ಯಕ್ಷರಾದ ವಿ. ಜಗದೀಶ್ ಸಂಘದ ಉಪಾಧ್ಯಕ್ಷರಾದ ಎನ್ ಆರ್ ಜಯಲಕ್ಷ್ಮಿ ,ನಿರ್ದೇಶಕರಾದ ಆರ್ ಅನಂತ ಕುಮಾರ್ ಬಿ ಎನ್ ತಿಪ್ಪೇಸ್ವಾಮಿ, ಹೆಚ್.ವಿ.ಶ್ರೀನಿವಾಸ ಶೆಟ್ಟಿ, ಎಚ್ ಎಸ್ ಮಂಜುನಾಥ್, ಅರುಣ್ ಕುಮಾರ್, ಪಿ.ವಿ ನಾಗರಾಜ್, ಎಸ್ ಹರ್ಷ, ಸಿ. ನವೀನ್ ,ಕಿರಣ್ ಕುಮಾರ್, ಆಂಜನೇಯ ಅರಳೀಕಟ್ಟಿ, ತಿಪ್ಪೇರುದ್ರಣ್ಣ , ಕೃಷ್ಣ ನಾಯ್ಕ, ಮಧುಸೂದನ್, ಬಿ ಜಿ ಮಂಜುನಾಥ್, ಟಿ ಲತಾ, ವ್ಯವಸ್ಥಾಪಕರಾದ ರಾಮಕೃಷ್ಣ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಆರ್ಯವೈಶ್ಯ ಸಮಾಜದ ಹಿರಿಯ ಗಣ್ಯರು  ಮತ್ತು ಶೇರುದಾರರು ಪಾಲ್ಗೊಂಡಿದ್ದರು.