65ನೇ ಕನ್ನಡ ರಾಜ್ಯೋತ್ಸವ ಆಚರಣೆ

ಬೆಟ್ಟದಪುರ: ನ.2- ಪಿರಿಯಾಪಟ್ಟಣ ತಾಲೂಕು ಚಪ್ಪರದಹಳ್ಳಿ ಗ್ರಾಮದ ಆದಿಯಪ್ಪಕವಿ ವೃತ್ತದ ಕುವೆಂಪು ಪ್ರತಿಮೆ ಬಳಿ ಅಖಿಲ ಕರ್ನಾಟಕ ನಿಖಿಲ್ ಸೈನ್ಯ ಸಮಿತಿ ತಾಲೂಕು ಘಟಕ ಹಾಗೂ ಕಸಾಪ ಗ್ರಾಮ ಘಟಕದ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಅಖಿಲ ಕರ್ನಾಟಕ ನಿಖಿಲ್ ಸೈನ್ಯ ಸಮಿತಿ ತಾಲೂಕು ಘಟಕದ ಗೌರವಾಧ್ಯಕ್ಷ ಮಧುಗೌಡ ಕನ್ನಡ ಧ್ವಜಾರೋಹಣ ಮಾಡುವುದರ ಮೂಲಕ ರಾಜ್ಯೋತ್ಸವ ಆಚರಣೆಗೆ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗದೆ, ಗ್ರಾಮೀಣ ಪ್ರದೇಶಗಳಲ್ಲಿಯು ಕನ್ನಡದ ಹಬ್ಬವನ್ನು ಆಚರಿಸುವುದರ ಮೂಲಕ ಕನ್ನಡಿಗರ ಒಗ್ಗೂಡಿಕೆಯನ್ನು ಎತ್ತಿಹಿಡಿಯಬೇಕು ಎಂದು ತಿಳಿಸಿದರು.
ಹಾರನಹಳ್ಳಿ ಹೋಬಳಿ ಘಟಕದ ಗೌರವಾಧ್ಯಕ್ಷ ಸಂತೋಷ್ ಪಟೇಲ್ ಮಾತನಾಡಿ ಸಂಘ ಸಮಿತಿಗಳು ಕೇವಲ ರಚನೆಗೆ ಅಥವಾ ಕಾರ್ಯಕ್ರಮಗಳನ್ನು ಆಚರಣೆ ಮಾಡಲು ಮಾತ್ರ ಸೀಮಿತವಾಗಬಾರದು. ಅದನ್ನು ಕಾರ್ಯರೂಪಕ್ಕೆ ತರಬೇಕು, ಸಮಿತಿಯ ಪದಾಧಿಕಾರಿಗಳು ಸಮಾಜದ ಅಭಿವೃದ್ದಿಗೆ ಸಹಕರಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಸಂತೋಷ್ ಗೌಡ, ಉಪಾಧ್ಯಕ್ಷ ಸುರೇಶ್, ಚಿಕ್ಕರಾಜು, ಪ್ರಧಾನ ಕಾರ್ಯದರ್ಶಿ ಎ.ಆರ್ ನವೀನ್ ಕುಮಾರ್, ಹಾರನಹಳ್ಳಿ ಹೋಬಳಿ ಘಟಕದ ಅಧ್ಯಕ್ಷ ಅಭಿಲಾಷ್ ಎಚ್.ಆರ್, ಉಪಾಧ್ಯಕ್ಷ ಪ್ರವೀಣ್ ಎಚ್.ಪಿ, ಕಸಾಪ ಚಪ್ಪರದಹಳ್ಳಿ ಗ್ರಾಮ ಘಟಕದ ಅಧ್ಯಕ್ಷ ಸಿ.ಪಿ ಸುರೇಶ್ ಸೇರಿದಂತೆ ಮುಖಂಡರುಗಳು ಹಾಜರಿದ್ದರು.