ವಿಜಯಪುರ ಪಟ್ಟಣದ ಪ್ರಗತಿ ಶಿಕ್ಷಣ ಸಂಸ್ಥೆಗಳ(ಪ್ರಗತಿ ಪ್ರಾಥಮಿಕ ಆಂಗ್ಲ ಶಾಲೆ, ಪ್ರಗತಿ ಪ್ರೌಢಶಾಲೆ, ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜು, ಪ್ರಗತಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಪ್ರಗತಿ ಕೈಗಾರಿಕಾ ತರಭೇತಿ ಕೇಂದ್ರ, ) ದೇವನಹಳ್ಳಿ ರಸ್ತೆಯಲ್ಲಿರುವ ಕ್ಯಾಂಪಸ್ ನ ನೂತನ ಪ್ರವೇಶದ್ವಾರವನ್ನು, ಮುಂಜಾನೆ ಪೂಜೆ ಸಲ್ಲಿಸುವ ಮೂಲಕ, ಸಂಸ್ಥೆಯ ಅಧ್ಯಕ್ಷರಾದ ಎಂ.ಸತೀಶಕುಮಾರ್ ಅವರು ಉದ್ಘಾಟಿಸಿದರು. ವ್ಯವಸ್ಥಾಪಕ ನಿರ್ದೇಶಕರಾದ ಕೃಪಾಶಂಕರ್, ಆಡಳಿತಾಧಿಕಾರಿ ರಜತಾ ಪಟೇಲ್, ಧರ್ಮದರ್ಶಿಗಳಾದ ಮಧುಕರ್, ಸುಧಾಸತೀಶ್, ಪ್ರಗತಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಬಿ.ಎನ್.ಪ್ರಕಾಶ್, ಪ್ರೌಢಶಾಲಾ ಮುಖ್ಯೋಪಾಧ್ಯಾಯ ವಿ.ಬಸವರಾಜು, ಪ್ರಾಂಶುಪಾಲರುಗಳಾದ ಹರೀಶ್, ಸುರೇಶ್, ಬಿ.ಎನ್.ರಮೇಶ್, ಹಾಗೂ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.