ಹಾವೇರಿ ಜಿಲ್ಲೆ ಜಗಮನ ಕೊಪ್ಪದಲ್ಲಿ ಕೆಎಂಎಫ್ ನ ಯು. ಎಚ್. ಟಿ ಹಾಲು ಸಂಸ್ಕರಣಾ, ಪ್ಯಾಕಿಂಗ್ ಘಟಕ ಮತ್ತು ಹಾಲು ಸ್ಯಾಚೆಟ್ ಘಟಕವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಶಿವರಾಮ ಹೆಬ್ಬಾರ, ಎಸ್.ಟಿ. ಸೋಮಶೇಖರ, ಪ್ರಭು ಚವ್ಹಾಣ, ಬಿ.ಸಿ. ಪಾಟೀಲ, ಶಾಸಕರಾದ ನೆಹರೂ ಓಲೆಕಾರ, ಅರುಣಕುಮಾರ ಪೂಜಾರ, ವಿರುಪಾಕ್ಷಪ್ಪ ಬಳ್ಳಾರಿ, ಹಾವೆಮುಲ್ ಅಧ್ಯಕ್ಷರಾದ ಬಸವರಾಜ ಅರಬಗೊಂಡ, ಮತ್ತಿತರರು ಉಪಸ್ಥಿತರಿದ್ದರು.