ವಿದ್ಯುತ್ ಸಮಸ್ಯೆ ನೀಗಿಸಲು ಕೇಂದ್ರದ ಕ್ರಮ

ನವದೆಹಲಿ/ ಬೆಂಗಳೂರು, ಮಾ. ೯-ದೇಶದಲ್ಲಿ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೇಸಿಗೆಯಲ್ಲಿ ವಿದ್ಯುತ್ ಕಡಿತದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ವಿದ್ಯುತ್ ಸಚಿವಾಲಯ ಹೇಳಿದೆ.
ಈ ಬೇಸಿಗೆಯಲ್ಲಿ ಮತ್ತು ಮುಂಬರುವ ವರ್ಷಗಳಲ್ಲಿ ದೇಶದಲ್ಲಿ ರಾತ್ರಿಯ ವಿದ್ಯುತ್ ಕಡಿತದ ಹೆಚ್ಚಿನ ಅಪಾಯ ಎದುರಿಸುತ್ತಿದೆ, ಹೊಸ ಕಲ್ಲಿದ್ದಲು ಮತ್ತು ಜಲವಿದ್ಯುತ್ ಸಾಮರ್ಥ್ಯ ಸೇರಿಸುವಲ್ಲಿನ ವಿಳಂಬಗಳು ಸೌರಶಕ್ತಿ ಕೊರತೆ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಪರಿಹರಿಸುವ ದೇಶದ ಸಾಮರ್ಥ್ಯ ಕಡಿಮೆಯಾಗಿದೆ ಎಂದಿದೆ.ಏಪ್ರಿಲ್ ಮತ್ತು ಮೇ ತಿಂಗಳ ಗರಿಷ್ಠ ಬೇಸಿಗೆಯ ತಿಂಗಳುಗಳಲ್ಲಿ ಅಡೆತಡೆಗಳನ್ನು ತಪ್ಪಿಸಲು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳ ನಿರ್ವಹಣೆಯನ್ನು ಮುಂಚಿತವಾಗಿ ಕೈಗೊಳ್ಳಲು ವಿದ್ಯುತ್ ಸ್ಥಾವರಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದೆ.
ಬೇಸಿಗೆಯ ತಿಂಗಳುಗಳಲ್ಲಿ ಲೋಡ್ ಶೆಡ್ಡಿಂಗ್ ಅನ್ನು ತಪ್ಪಿಸಲು ವಿದ್ಯುತ್ ಕಂಪನಿಗಳಿಗೆ ತಿಳಿಸಲಾಗಿದೆ.ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಲ್ಲಿ ಸಾಕಷ್ಟು ಕಲ್ಲಿದ್ದಲು ದಾಸ್ತಾನು ಲಭ್ಯವಾಗಲಿದ್ದು, ರೈಲ್ವೇ ಮಂಡಳಿಯು ಸರಕುಗಳನ್ನು ಸಾಗಿಸಲು ಸಾಕಷ್ಟು ರೇಕ್‌ಗಳ ಲಭ್ಯತೆಯ ಭರವಸೆ ನೀಡಿದೆ ಎಂದು ವಿದ್ಯುತ್ ಸಚಿವಾಲಯದ ಹೇಳಿಕೆ ತಿಳಿಸಿದೆ.
ವಿದ್ಯುತ್ ಗರಿಷ್ಠ ಬೇಡಿಕೆ ಪೂರೈಸಲು ಅನಿಲ ಆಧಾರಿತ ಶಕ್ತಿ ಬಳಸಲಾಗುವುದು ಮತ್ತು ಮುಂದಿನ ತಿಂಗಳು ಉತ್ತಮ ಲಭ್ಯತೆಗಾಗಿ ನೀರಿನ ಬಳಕೆಯನ್ನು ಅತ್ಯುತ್ತಮವಾಗಿಸಲು ಎಲ್ಲಾ ಜಲ ಸ್ಥಾವರಗಳಿಗೆ ಸೂಚನೆ ನೀಡಲಾಗಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.
೧೬.೮ ಗಿಗಾವ್ಯಾಟ್‌ಗಳ ಸಾಮರ್ಥ್ಯದ ೨೬ ಕಲ್ಲಿದ್ದಲು ಘಟಕಗಳ ನಿರ್ಮಾಣ ಒಂದು ವರ್ಷಕ್ಕೂ ಹೆಚ್ಚು ವಿಳಂಬವಾಗಿದೆ ಎಂದು ಕೇಂದ್ರ ವಿದ್ಯುತ್ ಪ್ರಾಧಿಕಾರದ ಅಂಕಿಅಂಶಗಳು ತೋರಿಸುತ್ತವೆ, ಕೆಲವು ಸ್ಥಾವರಗಳು ೧೦ ವರ್ಷಗಳಿಗಿಂತ ಹೆಚ್ಚು ವಿಳಂಬವಾಗಿವೆ. ಆದರೂ ದೇಶದಲ್ಲಿ ವಿದ್ಯುತ್ ಅಭಾವ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದೆ.
ಹೊಸ ಕಲ್ಲಿದ್ದಲು ಆಧಾರಿತ ಸ್ಥಾವರಗಳ ಮೂಲಕ ೨,೯೨೦ ಮೆಗಾವ್ಯಾಟ್‌ನ ಹೆಚ್ಚುವರಿ ಸಾಮರ್ಥ್ಯ ಲಭ್ಯವಾಗಲಿದ್ದು, ಮಾರ್ಚ್ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡಲಿದೆ ಎಂದು ವಿದ್ಯುತ್ ಸಚಿವಾಲಯ ತಿಳಿಸಿದೆ.