
ಎಸ್. ಎಸ್. ಕೆ. ಪಂಚ ಟ್ರಸ್ಟ್, ಶ್ರೀ ದುರ್ಗಾದೇವಿ ದೇವಸ್ಥಾನ, ದಾಜಿಬಾನ ಪೇಟ, ಹುಬ್ಬಳ್ಳಿ ವತಿಯಿಂದ ನಗರದ ದಾಜಿಬಾನ ಪೇಟೆಯ ಹುಬ್ಬಳ್ಳಿ ಕಾ ರಾಜ ಸರ್ಕಲ್‍ನಲ್ಲಿ ರತಿ ಕಾಮಣ್ಣರ ಮೂರ್ತಿಗಳನ್ನು ಪ್ರತಿಷ್ಠಾಪಿಸಿ, ಪೂಜೆ ಮಾಡಲಾಯಿತು. ಸಂಸ್ಥೆಯ ಚೀಫ್ ಟ್ರಸ್ಟಿ ತಾರಾಸಾ ಎನ್.ದೋಂಗಡಿ, ನೀಲಕಂಠ ಪಿ. ಜಡಿ, ಭಾಸ್ಕರ ಎನ್. ಜಿತೂರಿ, ಅಶೋಕ ಕೆ. ಕಲ್ಬುರ್ಗಿ, ಎನ್. ಆರ್. ಹಬೀಬ, ಎ. ಪಿ.ಪವಾರ ಸೇರಿದಂತೆ ಘಟಕದ ಪ್ರಮುಖರು ಉಪಸ್ಥಿತರಿದ್ದರು.