ನಗರದ ದಿವಟೆಗಲ್ಲಿಯ ಸ್ವಕುಳಸಾಳಿ (ದೈವಕಿ) ಸಮಾಜದ ಶ್ರೀ ಈಶ್ವರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮಹಾಪೌರರಾದ ವೆಂಕಟೇಶ ಮೇಸ್ತ್ರಿಯವರು ಮಹಿಳಾ ಮೋರ್ಚಾ ಪ್ರಮುಖರನ್ನು ಭೇಟಿಯಾಗಿ ಬಿಜೆಪಿ ಪಕ್ಷದ ಸಂಘಟನೆ, ರಾಜ್ಯ ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಮನೆ ಮನೆಗೆ ತಲುಪಿಸುವ ಕುರಿತು ವಿವರಿಸಿದರು. ಅನುರಾಧಾ ಚಿಲ್ಲಾಳ, ಪೂರ್ಣಿಮಾ ಶಿಂಧೆ, ಶೋಭಾ ನಾಕೋಡ, ಸುವರ್ಣ ಜಂಗಮಗೌಡರ, ಸವಿತಾ ಚೌಹಾಣ, ಪದ್ಮಾ ಬಿಂಗಳಪಲ್ಲಿ, ಪುಷ್ಪಾ ಅಬ್ಬಿಗೇರಿ, ಶಾಂತಿ ಹೆಬ್ಬಾಳ, ಲತಾ ಅಂಗಡಿ, ಪುಷ್ಪಾ ಪಲ್ಗುಣ, ಸುಲೋಚನಾ ಶಿಂಗ್ ಪಾಲ್ಗೊಂಡಿದ್ದರು.