ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ, ಹಿರಿಯ ನಟಿ ತಾರಾ ಅನುರಾಧರವರು ಇಂದು ನಗರದ ಕಾಕ್ಸ್‌ಟೌನ್‌ನಲ್ಲಿ ಶ್ರೀ ಗಂಗಮ್ಮ ದೇವಸ್ಥಾನದ ಬಳಿ ಪೌರಕಾರ್ಮಿಕರಿಗೆ ಸಿಹಿ, ಸೀರೆ ವಿತರಣೆ ಮಾಡಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಸಮಾಜ ಸೇವಕ ಎನ್.ಎಸ್.ರವಿ ಮತ್ತಿತರು ಭಾಗವಹಿಸಿ ತಾರಾ ಅವರಿಗೆ ಶುಭಾಶಯ ಕೋರಿದರು.